Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಂದ್ರಯಾನ-3: ಉಪಗ್ರಹ ಕಳುಹಿಸಿದ ಚಂದ್ರ-ಭೂಮಿಯ ಫೋಟೋ ಹಂಚಿಕೊಂಡ ಇಸ್ರೋ

ನವದೆಹಲಿ: ಪ್ರಪಂಚದ ಕಣ್ಣುಗಳು ಭಾರತದ ಚಂದ್ರಯಾನ-3 ಮಿಷನ್ ಮೇಲೆ ಕೇಂದ್ರೀಕೃತವಾಗಿವೆ. ಈ ಮಧ್ಯೆ ಉಪಗ್ರಹವು ಬಾಹ್ಯಾಕಾಶದಿಂದ ಭೂಮಿ ಹಾಗೂ ಚಂದ್ರನ ಹತ್ತಿರದ ಫೋಟೋಗಳನ್ನು ಕಳುಹಿಸಿದೆ. ಲ್ಯಾಂಡರ್ ಕಳುಹಿಸಿರುವ ಫೋಟೋವನ್ನು ಉಪಗ್ರಹ LHVC ಕ್ಯಾಮೆರ ಮೂಲಕ ತೆಗೆದಿದೆ. ಈ ಫೋಟೋವನ್ನು ಅಹಮ್ಮಾದಾಬಾದ್‌ನ ಬಾಹ್ಯಾಕಾಶ ಕೇಂದ್ರ ಹಾಗೂ ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ ಲ್ಯಾಬರೋಟರಿ ಅಭಿವೃದ್ಧಿಪಡಿಸಿದೆ. ಈ ಅಪರೂಪದ ಫೋಟೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಚಂದ್ರ ಮತ್ತು ಭೂಮಿಯ ಕುರಿತ ಚಂದ್ರನಂಗಳದಿಂದ ತೆಗೆದ ಫೋಟೋ ನೋಡಿ ಜನರು ಸಂತಸಗೊಂಡಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2:35ರ ಸುಮಾರಿಗೆ ಬಾಹ್ಯಾಕಾಶಕ್ಕೆ ನೆಗೆಯಿತು.