ಚನ್ನಗಿರಿ ಪುರಸಭೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ದಾವಣಗೆರೆ,: ಚನ್ನಗಿರಿ ಪುರಸಭೆ ವ್ಯಾಪ್ತಿಯ ಸಿಹಿನೀರು ಬಾವಿ ರಸ್ತೆ ಬಡಾವಣೆ ವಾರ್ಡ್ ಸಂಖ್ಯೆ-14 ರಲ್ಲಿ ಅಸ್ಲಾಂ ಬೇಗ್ ಬಿನ್ ಶೇರುಬೇಗ್ ಅವರ ಮರಣದಿಂದ ತೆರವಾಗಿರುವ ಸದಸ್ಯ ಸ್ಥಾನವನ್ನು ತುಂಬಲು ಉಪಚುನಾವಣೆ ಘೋಷಿಸಲಾಗಿದ್ದು, ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಚುನಾವಣೆ ವೇಳಾಪಟ್ಟಿಯನ್ನು ನಿಗಧಿಪಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯನ್ವಯ ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನ. ಡಿ.16 ನಾಮಪತ್ರಗಳ ಪರಿಶೀಲನೆ. ಡಿ. 18 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿ. 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಡಿ.30 ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.