ಚಪ್ಪಲಿ ಧರಿಸಿದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ-ಸಿವಿಲ್ ಕಾನ್ಸ್ಟೇಬಲ್ ಪರೀಕ್ಷೆಗೆ ವಸ್ತ್ರ ಸಂಹಿತೆ ಜಾರಿ!
ಬೆಂಗಳೂರು: ಫೆಬ್ರವರಿ 25ರಂದು ರಾಜ್ಯದ್ಯಂತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,137 ಹುದ್ದೆಗಳ ಭರ್ತಿಗಾಗಿ ಸಿವಿಲ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ನಡುವೆ ವಸ್ತ್ರಸಂಹಿತ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಶೋ ಧರಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಹಾಗೂ ಅರ್ಧ ತೋಳಿನ ಅಂಗಿ, ಸಾಧ್ಯವಾದಷ್ಟು ಕಾಲರ್ ರಹಿತ ಅಂಗಿ, ಹಾಗೂ ಕಡಿಮೆ ಜೇಬುಗಲ್ಲಿರುವ ಅಂಗಿ ಧರಿಸುವಂತೆ ಸೂಚಿಸಲಾಗಿದೆ. ಜೀನ್ಸ್ ಪ್ಯಾಂಟ್ ಕೂಡ ನಿಷೇಧಿಸಲಾಗಿದೆ. ಇನ್ನು ಮಹಿಳೆಯರಿಗೆ ಎತ್ತರವಾದ, ಹಿಮ್ಮಡಿ ಇರುವ ದಪ್ಪವಾದ ಅಡಿಭಾಗ ಹೊಂದಿರುವ ಶೂ, ಚಪ್ಪಲಿ ನಿಷೇಧಿಸಲಾಗಿದ್ದು, ಲೋಹದ ಆಭರಣಗಳನ್ನು ಧರಿಸುವಂತಿಲ್ಲ ಎಂದು ಹೇಳಲಾಗಿದೆ. ಮಾಂಗಲ್ಯ ಮತ್ತು ಕಾಲುಂಗುರ ಧರಿಸುವುದಕ್ಕೆ ಅನುಮತಿ ನೀಡಲಾಗಿದೆ. ಇನ್ನು ಸಿವಿಲ್ ಕಾನ್ಸ್ಟೆಬಲ್ ಲಿಖಿತ ಪರೀಕ್ಷೆ ರಾಜ್ಯದ್ಯಂತ ವಿವಿಧ ಕೇಂದ್ರಗಳಲ್ಲಿ ಬೆಳೆಗೆ 10 ಗಂಟೆಯಿಂದ 12:30 ಗಂಟೆವರೆಗೂ ನಡೆಯಲಿದೆ. ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳ ಮೊಬೈಲ್ಗೆ ಲಿಂಕ್ ಕಳಿಸಲಾಗುವುದು ಎಂದು ತಿಳಿಸಿದ್ದಾರೆ. ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು, ನೇಮಕಾತಿ ವಿಭಾಗ ಸೂಚಿಸಿದಂತೆ ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವೆಂದು ಡಿಐಜಿ ಹೇಳಿದ್ದಾರೆ. ಒಂದು ವೇಳೆ ಪಾಲಿಸದಿದ್ದರೆ ಪರೀಕ್ಷಾ ವೇಳೆ ತೊಂದರೆಯಾಗುವುದು ಇಂದು ಎಚ್ಚರಿಸಿದ್ದರೆ.