Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ.!

ಲಿಂಗಸಗೂರು; ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ ದೇವರ ದಾಸಿಮ್ಮಯ್ಯ ಹಟಗಾರ ಸಮಾಜದ ಜಗದ್ಗುರು, ಅಕ್ಕಲಕೋಟೆಯ ರೇವಣಸಿದ್ಧ ಮಹಾಸಂಸ್ಥಾನ ಮಠದ ಪೀಠಾಧಿಪತಿ ಚಿಕ್ಕ ರೇವಣಸಿದ್ಧ ಶಿವಶರಣರು ಇಂದು ಅಸ್ತಂಗತರಾಗಿದ್ದಾರೆ.

ಶ್ರೀಗಳು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಅಗಲಿಕೆಯ ಸುದ್ದಿ ಕೇಳಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು ದುಃಖತಪ್ತರಾಗಿದ್ದಾರೆ. ಶ್ರೀಗಳ ಅಂತ್ಯಕ್ರಿಯೆಯು ನಾಳೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುಡದನಾಳದ ಮಠದ ಆವರಣದಲ್ಲಿ ನಡೆಯಲಿದೆ.