Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ- ಡಿ. ಸುಧಾಕರ್

 

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಷ್ಟ್ರದ 02 ನೇ ಅತ್ಯುತ್ತಮ ಡಿ.ಸಿ.ಸಿ. ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರೂ ಆಗಿರುವ ಡಿ. ಸುಧಾಕರ್ ಅವರು ಹೇಳಿದರು.

ಚಿತ್ರದುರ್ಗದ ಡಿ.ಸಿ.ಸಿ. ಬ್ಯಾಂಕ್‍ನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಚಿವರು, ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 351 ಡಿ.ಸಿ.ಸಿ. ಬ್ಯಾಂಕುಗಳ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 02 ನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಯನ್ನು ಚಿತ್ರದುರ್ಗದ ಡಿ.ಸಿ.ಸಿ. ಬ್ಯಾಂಕ್ ಪಡೆದುಕೊಂಡಿದೆ.  ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ ಲಿ. (ಎನ್.ಎ.ಎಫ್.ಎಸ್.ಸಿ.ಒ.ಬಿ) ಮುಂಬೈ ಅವರ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಕೊಡಮಾಡುವ ಅತ್ಯುತ್ತಮ ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ತೆಲಂಗಾಣದ ಕರೀಂನಗರ ಡಿಸಿಸಿ ಬ್ಯಾಂಕ್ ಹಾಗೂ ಮೂರನೆ ಸ್ಥಾನವನ್ನು ರಾಜಸ್ಥಾನದ ಜೈಪುರ ಡಿಸಿಸಿ ಬ್ಯಾಂಕ್ ಪಡೆದುಕೊಂಡಿದೆ.  ಇದು 2021-22 ನೇ ಸಾಲಿನ ಪ್ರಶಸ್ತಿಯಾಗಿದೆ.  ಕಳೆದ ಸೆ. 26 ರಂದು ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಗಿದೆ.  ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‍ಉಲ್ಲಾ ಷರೀಫ್ ಪ್ರಶಸ್ತಿ ಮತ್ತು ಪಾರಿತೋಷಕವನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ರಾಜಸ್ಥಾನ ರಾಜ್ಯದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೇಯಾ, ಓಂಈSಅಔಃ ನ ಅಧ್ಯಕ್ಷ ಕೊಂಡೂರು ರವೀಂದ್ರ ರಾವ್, ಉಪಾಧ್ಯಕ್ಷ ಉಲ್ಲಾಸ್ ದೇಸಾಯಿ, ಸಿಇಒ ಭೀಮಾ ಸುಬ್ರಮಣ್ಯಂ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತ್ತು ಸಿಇಒ ಸಿ.ಎನ್. ದೇವರಾಜ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಶಾಸಕರಾದ ರಘುಮೂರ್ತಿ, ನಿರ್ದೇಶಕರಾದ ಟಿ. ಮಹಾಂತೇಶ್, ಎಸ್.ಆರ್. ಗಿರೀಶ್, ನಿಶಾನಿ ಜಯಣ್ಣ, ರಘುರಾಂ ರೆಡ್ಡಿ, ಶಶಿಧರ್ ಹಾಗೂ ದ್ಯಾಮಣ್ಣ ಉಪಸ್ಥಿತರಿದ್ದರು.