Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿತ್ರದುರ್ಗ ಮಠದ ಆಡಳಿತಾಧಿಕಾರ ಮರಳಿ ಪಡೆದ ಮುರುಘಾಶ್ರೀ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ 2022, ಸೆಪ್ಟೆಂಬರ್ 1ರಂದು ಬಂಧನವಾಗಿದ್ದ ಮುರುಘಾಶ್ರೀ ಸತತ 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ಸರ್ಕಾರವೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು.

ನ. 16 ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಆಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದು ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿ ಹೈಕೋರ್ಟ್​ ಆದೇಶಿಸಿದ ಬೆನ್ನಲ್ಲೇ ಲಕೋಟೆ ಮೂಲಕ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರ ಪತ್ರ ರವಾನಿಸಲಾಗಿದೆ.

ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಮುರುಘಾಶ್ರೀಗೆ ಹೈಕೋರ್ಟ್ ಷರತ್ತು ನೀಡಿದ ಹಿನ್ನಲೆ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮುರುಘಾ ಶ್ರೀಗಳು ಮಠದ ಆಡಳಿತವನ್ನು ನಡೆಸಲಿದ್ದಾರೆ