Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣಾ ಬಾಂಡ್‌ ಸಮರ್ಥಿಸಿಕೊಂಡಿದ್ದ ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ಹಿಗ್ಗಾಮುಗ್ಗ ವಾಗ್ದಾಳಿ

ಕೋಝಿಕ್ಕೋಡ್ : ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮೋದಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಹೌದು ಸಂದರ್ಶನದಲ್ಲಿ ಪ್ರಧಾನಿ ವಿವಾದಿತ ಚುನಾವಣಾ ಬಾಂಡ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಚುನಾವಣಾ ಬಾಂಡ್‌ನ ನಿಜವಾದ ವಿಷಯ ಗೊತ್ತಾದ್ರೆ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ ಎಂದು ಹೇಳಿದ್ದರು.ಈ ವಿಚಾರದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಸಂದರ್ಶನದಲ್ಲಿ ಮೋದಿ ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ದೇಶದ ಕೆಲವೇ ಕೆಲವು ಶ್ರೀಮಂತರ ಸಾಧನವಾಗಿದ್ದಾರೆ. ಮೋದಿ ಅವರ ನಿಜವಾದ ಕೆಲಸ ಏನಂದ್ರೆ ದೇಶದ ಜನರ ದಾರಿ ತಪ್ಪಿಸುವುದು.

ಮತ್ತು ಭಾರತದ ಶ್ರೀಮಂತ ಉದ್ಯಮಿಗಳ ಬ್ಯಾಂಕ್‌ ಸಾಲವನ್ನು ಮನ್ನಾ ಮಾಡುವುದಾಗಿದೆ ಎಂದಿದ್ದಾರೆ. ಅವರು ರೈತರ ಸಮಸ್ಯೆಗಳು,ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಉತ್ತರಿಸುವುದಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ ಸಂವಿಧಾನವನ್ನು ಬದಲಾವಣೆ ಮಾಡಲು ಮುಂದಾಗಿದೆ. 5 ರಿಂದ 6 ಅತಿ ದೊಡ್ಡ ಶ್ರೀಮಂತ ಉದ್ಯಮಿಗಳ ಸಾಧನವಾಗಿದ್ದಾರೆ. ದೇಶದ 20-25 ಮಂದಿಗೆ 16 ಲಕ್ಷ ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದೇ ವೇಳೆ, ಚುನಾವಣಾ ಬಾಂಡ್‌ ಅನ್ನೋದು ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಸ್ಕೀಮ್‌ ಆಗಿದೆ. ಅದರ ಸಂಪೂರ್ಣ ಪ್ಲಾನ್ ರೆಡಿ ಮಾಡಿರೋದು ಅವರೇ ಆಗಿದ್ದಾರೆ. ಚುನಾವಣಾ ಬಾಂಡ್‌ನ ರಹಸ್ಯಗಳನ್ನು ಮುಚ್ಚಿಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದರೂ ಕೆಲವರ ಹೆಸರನ್ನು ಮುಚ್ಚಿಟ್ಟಿದ್ದು ಯಾಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.