Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಚುನಾವಣಾ ರಾಜಕೀಯದಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದೇನೆ’ – ನಿಖಿಲ್‌

ಬೀದರ್: ಕೆಲ‌ ದಿನಗಳ ಕಾಲ ಚುನಾವಣಾ ರಾಜಕಾರಣದಿಂದ ಕೆಲ ದಿನಗಳ ಕಾಲ ದೂರವುಳಿಯುವ ತೀರ್ಮಾನ ಮಾಡಿದ್ದೇನೆ ಎಂದು ಜೆಡಿಎಸ್‌ ನಾಯಕ, ಚಿತ್ರನಟ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸಧ್ಯಕ್ಕೆ ಚಲನಚಿತ್ರದ ಶೂಟಿಂಗ್‌ ಆರಂಭವಾಗಿದ್ದು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವದಾಗಲಿ ಚುನಾವಣಾ ರಾಜಕಾರಣದಲ್ಲಿ ಇಳಿಯುವದಾಗಲಿ ಕಷ್ಟದ ಕೆಲಸ. ಹಾಗಾಗಿ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ಇನ್ನು ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಕುರಿತಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು, ಅಲ್ಲಿ ಬಿಜೆಪಿ ನಮಗೆ ಸಹಕರಿಸಲಿ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು ಅಲ್ಲಿ ನಾವು ಅವರಿಗೆ ಸಹಕರಿಸುವ ಮಾತುಗಳನ್ನು ಮಾತ್ರ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಆಡಿದ್ದಾರೆ ಹೊರತು ಮೈತ್ರಿ ಬಗ್ಗೆ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.