ಚೆನ್ನೈ ಸರಕಾರಿ ಬಸ್ ನ ಪುಟ್ ಬೋರ್ಡ್ ನಲ್ಲಿ ನೇತಾಡುತ್ತಿದ್ದ ವಿಧ್ಯಾರ್ಥಿಗಳಿಗೆ ಪೆಟ್ಟುಕೊಟ್ಟ ನಟಿ ಅರೆಸ್ಟ್
ಚೆನ್ನೈ : ಸರಕಾರಿ ಬಸ್ ನ ಪುಟ್ ಬೋರ್ಡ್ ನಲ್ಲಿ ನೇತಾಡುತ್ತಿದ್ದ ಶಾಲಾ ವಿಧ್ಯಾರ್ಥಿಗಳಿಗೆ ಥಳಿಸಿದ ಆರೋಪದ ಮೇಲೆ ನಟಿ ಬಿಜೆಪಿ ನಾಯಕಿ ರಂಜನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೋರೂರಿನಿಂದ ಕುಂದ್ರತ್ತೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿದ್ದುದನ್ನು ಕಂಡು ಆಕ್ರೋಶಗೊಂಡ ರಂಜನಾ, ಬಸ್ ನಿಲ್ಲಿಸುವಂತೆ ಚಾಲಕನೊಂದಿಗೆ ವಾಗ್ವಾದಕ್ಕಿಳಿದರು.
ಬಸ್ಸಿನ ಮೆಟ್ಟಿಲಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿದ ಅವರು ಕ್ಲಾಸ್ ತೆಗೆದುಕೊಂಡಿದ್ದಲ್ಲದೆ. ವಿಧ್ಯಾರ್ಥಿಗಳಿಗೆ ಪೆಟ್ಟುಕೊಟ್ಟಿದ್ದಾರೆ. ಅಲ್ಲದೆ ಸರಕಾರಿ ಬಸ್ ಕಂಡಕ್ಟರ್ ಗೆ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಟಿಯ ಉದ್ದೇಶ ಸರಿ ಇದ್ದರೂ ಅನುಷ್ಠಾನದ ಹಾದಿ ತಪ್ಪು ಎಂದು ಸಾರ್ವಜನಿಕರು ಹೇಳಿದ್ದು, ಇದೀಗ ನಟಿ ರಂಜನಾ ಅವರ ಚಾಲಕ ಸರವಣನ್ ನೀಡಿದ ದೂರಿನ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಸರ್ಕಾರಿ ನೌಕರರನ್ನು ಕೆಲಸ ಮಾಡದಂತೆ ತಡೆಯುವುದು, ಅಸಭ್ಯವಾಗಿ ಮಾತನಾಡುವುದು, ಹಲ್ಲೆ ಮಾಡುವುದು ಸೇರಿದಂತೆ ಐದು ಸೆಕ್ಷನ್ಗಳ ಅಡಿಯಲ್ಲಿ ರಂಜನಾ ಅವರನ್ನು ಬಂಧಿಸಲಾಗಿದೆ.