Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚೈತ್ರಾ ಕುಂದಾಪುರ ಕೋಟ್ಯಾಂತರ ರೂಪಾಯಿ ಡೀಲ್ ಪ್ರಕರಣ – ಗೋವಿಂದ ಬಾಬು ಪೂಜಾರಿ ಆಪ್ತ ಪ್ರಸಾದ್ ಬೈಂದೂರು ಸಿಸಿಬಿ ವಶಕ್ಕೆ..!

ಬೈಂದೂರು ಬಿಜೆಪಿ ಟಿಕೆಟ್ ಗೆ ಡೀಲ್ ಪ್ರಕರಣದಲ್ಲಿ ಈಗಾಗಲೇ ಚೈತ್ರಾ ಕುಂದಾಪುರ ಸಹಿತ ಹಲವರ ಬಂಧನವಾಗಿದ್ದು, ಇದೀಗ ಗೋವಿಂದ ಬಾಬು ಪೂಜಾರಿ ಆಪ್ತ ಪ್ರಸಾದ್ ಬೈಂದೂರು ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ ಆಪ್ತನಾಗಿರುವ ಪ್ರಸಾದ್ ಬೈಂದೂರು ಹಣಕಾಸಿನ ವ್ಯವಹಾರ, ಸಂಪರ್ಕಗಳಿಗೆ ಪ್ರಸಾದ್ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪ್ರಸಾದ್ ನನ್ನು ಸಿಸಿಬಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪ್ರಸಾದ್ ಪ್ರಕರಣದ A8 ಆರೋಪಿಯಾಗಿದ್ದು, ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರಳನ್ನು ಪರಿಚಯಿಸಿದ್ದ. ಬಳಿಕ ಗೋವಿಂದ ಬಾಬು ಪೂಜಾರಿ ಜೊತೆ ಒಡನಾಟ ಬೆಳೆಸಿಕೊಂಡಿದ್ದ ಚೈತ್ರಾ ಕುಂದಾಪುರ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದಳು‌.