ಜಗತ್ತೇ ತಿರುಗಿ ನಿಂತರೂ, ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ -ರಾಹುಲ್ ಗಾಂಧಿ
ಅಸ್ಸಾಂ: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸಲು ಬಿಜೆಪಿಯ ಹಲವು ಮುಖಂಡರು ತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ನಾನು ದೈರ್ಯಗೆಡುವುದಿಲ್ಲ. ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿ ನಿಂತರು ನಾನು ಮಾತ್ರ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಗುವಾಹಟಿ ಬಳಿ ನ್ಯಾಯಯಾತ್ರೆ ತಡೆದ ವೇಳೆ ನಡೆದ ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, ನನಗೆ ಸಂತೋಷವಾಗಿದೆ. ಬಿಜೆಪಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸುವ ಮೂಲಕ ನಮಗೆ ಸಹಾಯವನ್ನೇ ಮಾಡುತ್ತಿದೆ. ಇದ್ದರಿಂದ ಎಲ್ಲೆಡೆ ನಮಗೆ ಹೆಚ್ಚಿನ ಪ್ರಚಾರ ದೊರೆಯಲಿದೆ ಎಂದರು.
ಇನ್ನು ಯಾತ್ರೆ ವೇಳೆ ನಡೆದ ಘರ್ಷಣೆಯಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವಲ್ಪ ಗಾಯವಾಗಿದೆ. ಇದು, ಭಯಪಡುವ ವಿಚಾರವೇ ಅಲ್ಲ. ಈ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಈ ಯಾತ್ರೆಯನ್ನು ಮಾಡಲು ನಿರ್ಧರಿಸಲಾಗಿದೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಸಿದ್ಧಾಂತಕ್ಕಾಗಿ ಹೋರಾಡಿಯೇ ತೀರುತ್ತೇನೆ ಎಂದರು.