ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ನಲ್ಲಿ ಮೋಜು: ಸಿಎಂ ವಿರುದ್ದ ಬಿಜೆಪಿ ಟೀಕೆ
ಬೆಂಗಳೂರು: ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ. ದೇಶದ ಬಡವರು ತೀವ್ರ ಬರ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಮಜಾವಾದಿ ಮುಖ್ಯಮಂತ್ರಿ ಜನರ ತೆರಿಗೆ ಹಣದಲ್ಲಿ ಪ್ರೈವೇಟ್ ಜೆಟ್ ರೈಡ್ ಆನಂದಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ದೆಹಲಿಯಿಂದ ಬೆಂಗಳೂರಿಗೆ ಐಷಾರಾಮಿ ಪ್ರೈವೇಟ್ ಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಆಗಮಿಸಿರುವ ಕುರಿತು ಟೀಕಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ರಸ್ತೆಗುಂಡಿಗಳು ಸೇರಿದಂತೆ ಯಾವುದೇ ಸಮಸ್ಯೆಗೆ ಕಾಂಗ್ರೆಸ್ ಗಮನ ಹರಿಸಿಲ್ಲ. ಆದರೆ, ಮಜವಾದಿ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಅದ್ದೂರಿಯಾಗಿ ಜೀವನ ನಡೆಸುತ್ತಿರುವುದು ಬಡವರ ಕಡೆಗಣನೆಗೆ ಹಾಗೂ ಸಾರ್ವಜನಿಕ ಹಣ ದುರುಪಯೋಗಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಕಿಡಿಕಾರಿದ್ದಾರೆ.