Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜಪಾನ್‌: ಹಿರೋಷಿಮಾದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

ಹಿರೋಷಿಮಾ:  ಜಪಾನ್‌ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಜಿ7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಶುಕ್ರವಾರ ಸ್ವಾಗತಿಸಿದರು. ನಾನು ಜಪಾನ್​​ಗೆ ಬಂದಾಗೆಲ್ಲ ಇಲ್ಲಿಯ ಜನರ ಶಾಂತಿ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಇಂದಿಗೂ ಜಗತ್ತು ಹಿರೋಷಿಮಾ ಹೆಸರು ಕೇಳಿದರೆ ಹೆದರುತ್ತಿದೆ.ಜಪಾನ್​​​ನಲ್ಲಿ ನಾನು ಮಹಾತ್ಮ ಗಾಂಧಿಯವರಿಗೆ ನನ್ನ ಗೌರವವನ್ನು ಸಲ್ಲಿಸಿರುವುದು ಒಂದು ದೊಡ್ಡ ಗೌರವ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯು ಅಹಿಂಸೆಯ ಕಲ್ಪನೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮೇ 19-21ರವರೆಗೆ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ದೇಶ ನಾಯಕರು ಜಪಾನ್‌ನಲ್ಲಿದ್ದಾರೆ. ಜಪಾನ್ 2023ರಲ್ಲಿ G7 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಶೃಂಗಸಭೆಯು G7 ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಜಪಾನ್, ಇಟಲಿ ಮತ್ತು ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ನಾಯಕರಿಗೆ ಇದು ವಾರ್ಷಿಕವಾಗಿ ನಡೆಯುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ.