ಜಿಲ್ಲಾ ಉಸ್ತುವಾರಿ ಸಚಿವರ ಖಡಕ್ ಸೂಚನೆ: ಕೃಷಿ ಪಂಪ್‍ಸೆಟ್ ಮಾರ್ಗಗಳಿಗೆ ಪ್ರತಿದಿನ 5 ಗಂಟೆಗಳ ವಿದ್ಯುತ್
ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ರೈತರ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ ನಿರಂತರವಾಗಿ 5 ಗಂಟೆ ಅಥವಾ ಹಗಲು ಪಾಳಿಯಲ್ಲಿ 3 ಗಂಟೆ ಮತ್ತು ರಾತ್ರಿ ಪಾಳಿಯಲ್ಲಿ 2 ಗಂಟೆಗಳಂತೆ ಪ್ರತಿದಿನ 05 ಗಂಟೆಗಳ ವಿದ್ಯುತ್ ಅನ್ನು ಕೃಷಿ ಪಂಪ್‍ಸೆಟ್ ಮಾರ್ಗಗಳಿಗೆ ಒದಗಿಸಲಾಗುತ್ತಿದೆ ಎಂದು ಬೆಸ್ಕಾಂ ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 375 ಕೃಷಿ ಪಂಪ್‍ಸೆಟ್ ಮಾರ್ಗಗಳಿದ್ದು, ಈ ನೀರಾವರಿ ಮಾರ್ಗಗಳಿಗೆ ಪ್ರತಿದಿನ 5 ಗಂಟೆಗಳ ನಿರಂತರ ವಿದ್ಯುತ್ ಒದಗಿಸಲು ಸರ್ಕಾರದಿಂದ ಆದೇಶವಾಗಿರುವ ಮೇರೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಶಾಸಕರು ಮತ್ತು ರೈತ ಸಂಘಟನೆಗಳ ಜೊತೆ ಈಗಾಗಲೆ ಸಮಾಲೋಚನೆ ನಡೆಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ರೈತರ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ ನಿರಂತರವಾಗಿ 5 ಗಂಟೆ ಅಥವಾ ಹಗಲು ಪಾಳಿಯಲ್ಲಿ 3 ಗಂಟೆ ಮತ್ತು ರಾತ್ರಿ ಪಾಳಿಯಲ್ಲಿ 2 ಗಂಟೆಗಳಂತೆ ಪ್ರತಿದಿನ 5 ಗಂಟೆಗಳ ವಿದ್ಯುತ್ ಅನ್ನು ಕೃಷಿ ಪಂಪ್‍ಸೆಟ್ ಮಾರ್ಗಗಳಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರನ್ನು ಬೆಂಗಳೂರಿನಲ್ಲಿ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಸರ್ಕಾರದ ನಿರ್ದೇಶನವನ್ನು ಪಾಲಿಸುವಂತೆ ತಿಳಿಸಿರುತ್ತಾರೆ. ಬೆಸ್ಕಾಂ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್‍ಗಳಾದ ಡಿ.ಜಯಣ್ಣ, ರಾಮಚಂದ್ರ ಸುತಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.