Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಜಿ20 ಶೃಂಗಸಭೆಗೆ ಆಹ್ವಾನ ಇಲ್ಲದೆ ಹೇಗೆ ಹೋಗಲಿ’- ಖರ್ಗೆ

ಕಲಬುರಗಿ: ಜಿ20 ಶೃಂಗಸಭೆ ದೆಹಲಿಯಲ್ಲಿ ಇಂದಿನಿಂದ ಆರಂಭಗೊಂಡಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿ ಕೇಳಿ ಬರುತ್ತಿದೆ. ಈ ಕುರಿತು ಖರ್ಗೆ ಪ್ರತಿಕ್ರಿಯಿಸಿದ್ದು, ಆಹ್ವಾನ ಇಲ್ಲದೆ ಜಿ20 ಸಭೆಗೆ ನಾನು ಹೇಗೆ ಹೋಗಲಿ ಎಂದಿದ್ದಾರೆ. ಜಿ 20 ಸಭೆ ಸಮಾರಸ್ಯದ ಸಭೆ. ದೇಶದಲ್ಲಿ, ಪ್ರಪಂಚದಲ್ಲಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರುವುದು ಒಳ್ಳೆಯದು ಎಂದು ಹೇಳಿದರು.

ದೇಶವನ್ನು ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ವಿಚಾರವಾಗಿ ಮಾತನಾಡಿದ ಅವರು, ಇಂಡಿಯಾ ಅಂದರೆ ಭಾರತ. ಅದು ದೇಶದ ಸಂವಿಧಾನದಲ್ಲೇ ಇದೆ. ಇದು ಯಾರು ಬೇಡ ಅಂದಿದ್ದಾರೋ ಗೊತ್ತಿಲ್ಲ ಎಮದರು.
ದೇಶದ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಹಾಕುತ್ತಾರೆ. ಸಾರ್ಟ್‌ ಇಂಡಿಯಾ, ಡಿಜಿಟಲ್ ಇಂಡಿಯಾ ಅಂತಾ ಯಾಕೆ ಇಟ್ಟಿದ್ದಾರೆ. ದೇಶದಲ್ಲಿ ಭಾರತ್ ಜೋಡೋ ಅಂತಾ ನಾವೇ ಪ್ರಚಾರ ಮಾಡಿದ್ದೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರು ಮಾತ್ರವಲ್ಲ, ಅವರು ಅಧಿಕೃತ ವಿರೋಧ ಪಕ್ಷದ ನಾಯಕರು. ಅವರನ್ನು ಜಿ20 ಶೃಂಗಸಭೆಗೆ ಕರೆಯದಿರುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಬೇರೆ ಕೆಲಸ ಇರುವ ಕಾರಣಕ್ಕೆ ಔತಣಕೂಟಕ್ಕೆ ಹೋಗತಿಲ್ಲ ಎಂದರು.