Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜು.03ರಂದು ಕೊರಗರು, ಜೇನು ಕುರುಬರ ಜತೆ ರಾಷ್ಟ್ರಪತಿ ಮುರ್ಮು ಸಂವಾದ

ಮೈಸೂರು: ಮೈಸೂರು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜು.03 ರಂದು ಸಂವಾದ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ತಮ್ಮ ಹಕ್ಕು ಹಾಗೂ ಸವಲತ್ತುಗಳಿಂದ ದೀರ್ಘ ಕಾಲದಿಂದಲೂ ವಂಚಿತರಾಗಿರುವ ಸಮುದಾಯದ ಮಂದಿಗೆ ರಾಷ್ಟ್ರಪತಿಗಳೊಂದಿಗಿನ ಸಂವಾದದಲ್ಲಿ ಭಾಗಿಯಾಗುತ್ತಿರುವುದು ಉತ್ಸಾಹ ಮೂಡಿಸಿದೆ.

ನಿರ್ದಿಷ್ಟವಾಗಿ ದುರ್ಬಲವಾದ ಬುಡಕಟ್ಟು ಗುಂಪಿನ ಸದಸ್ಯರನ್ನು ಮುರ್ಮು ಭೇಟಿ ಮಾಡಲಿದ್ದು, ಜೇನು ಕುರುಬ ಹಾಗೂ ಕೊರಗ ಸಮುದಾಯಗಳಿರುವ ಈ ಸಮುದಾಯಕ್ಕೆ ಪಿವಿಟಿಜಿ ಮೂಲಕ ತಮ್ಮ ಸಬಲೀಕರಣದ ಕನಸು ನನಸಾಗುವ ನಿರೀಕ್ಷೆ ಇದೆ.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭ

ಮೈಸೂರಿನಲ್ಲಿರುವ ಕರ್ನಾಟಕ ಬುಡಕಟ್ಟು ಸಂಶೋಧನೆ ಇನ್ಸ್ಟಿಟ್ಯೂಟ್ ರಾಷ್ಟ್ರಪತಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕಾಗಿ ಕೊರಗ ಸಮುದಾಯದ 20 ಮಂದಿ ಹಾಗೂ ಜೇನು ಕುರುಬ ಸಮುದಾಯದ 20 ಮಂದಿಯನ್ನು ಆಯ್ಕೆ ಮಾಡಿದೆ. ಬುಡಕಟ್ಟು ನಿರ್ದೇಶನಾಲಯ ಜೇನು ಕುರುಬ ಸಮುದಾಯದಲ್ಲಿ 36,000 ಜನಸಂಖ್ಯೆ ಹಾಗೂ ಕೊರಗ ಸಮುದಾಯದಲ್ಲಿ 14,500 ಮಂದಿ ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇರುವುದನ್ನು ಗುರುತಿಸಿದ್ದು, ಇದನ್ನು ಪ್ರಾಚೀನ ಬುಡಕಟ್ಟುಗಳೆಂದು ಹೇಳಿದೆ.