ಜೆಎನ್1 ರೂಪಾಂತರಿಗೂ ಸಿಗಲಿದೆ ಶೀಘ್ರ ಪರಿಣಾಮಕಾರಿ ಲಸಿಕೆ
ಪುಣೆ: ಕೋವಿಶೀಲ್ಡ್ ಲಸಿಕೆ ಮೂಲಕ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಹೆಗ್ಗಳಿಕೆಯುಳ್ಳ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಇದೀಗ ಜೆಎನ್1 ವಿರುದ್ಧವೂ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ. ಜೆಎನ್1 ರೂಪಾಂತರಿ ವೈರಸ್‌ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣ ತೀವ್ರಗೊಳ್ಳದಂತೆ ಮತ್ತು ಮೃತ್ಯು ಆಗದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಈ ನಡುವೆ ‘ಸೀರಂ’ ಪ್ರತ್ಯೇಕವಾಗಿ ಲಸಿಕೆ ಬಿಡುಗಡೆಗೊಳಿಸಲು ತಯಾರಿ ನಡೆಸಿದೆ.