Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಪ್ರಾಥಮಿಕ ಹಂತದಲ್ಲಿದೆ: ಬಸವರಾಜ ಬೊಮ್ಮಾಯಿ..!

ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳ್ಳಾರಿ; ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ.

ಕರ್ನಾಟಕದಲ್ಲಿ ನಾಲ್ಕು ತಿಂಗಳ ಆಡಳಿತ ನೋಡಿದರೆ. ಎಲ್ಲರೂ ಸೇರಿ ಕಾಂಗ್ರೆಸ್ ವಿರೋಧ ಮಾಡುವ ಅವಶ್ಯಕತೆ ಇದೆ.

ಕುಮಾರಸ್ವಾಮಿ ಅವರ ಹೇಳಿಕೆ ಗಮನಿಸಿದರೆ, ಮೈತ್ರಿ ಮಾಡಿಕೊಳ್ಳುವ ವಿಚಾರ ಸುದೀರ್ಘ ಚೆರ್ಚೆ ಆಗಬೇಕು. ಮೈತ್ರಿ ವಿಚಾರ ಇನ್ನೂ ಅಂತಿಮ ಹಂತದ ನಿರ್ಧಾರ ಆಗಿಲ್ಲ. ಪ್ರಾಥಮಿಕ ಹಂತದಲ್ಲಿದೆ ಎಂದರು.

ಸಿಎಂ ಅಸಹಾಯಕರಾಗಿದ್ದಾರೆ :
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು 2013 ರಲ್ಲಿ ಒಂದು ರೀತಿಯಲ್ಲಿ ಇದ್ದರು,

ಈಗ ಇರುವ ಸಿದ್ದರಾಮಯ್ಯ ಬೇರೆ. ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾ ನೋಡಿರುವೆ.

ಸಿದ್ದರಾಮಯ್ಯ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ.. ಅವರ ಆಡಳಿತ ಮೇಲೂ ಇದೆ, ರಾಜಕೀಯ ವಿಚಾರದಲ್ಲೂ ಇದೆ. ಈ ವಿಚಾರ ಆಂತರಿಕವಾಗಿ ಎಲ್ಲರಿಗೂ ಗೆತ್ತಾಗಿದೆ, ಈ ಕುರಿತು ಬೇಗುದಿ ಕೂಡಾ ಇದೆ.

ಸಿದ್ದರಾಮಯ್ಯ ಅವರ ಮೇಲೆ ಆಂತರಿಕ ಒತ್ತಡ ಇದೆ. ಅದರ ಒಂದು ಭಾಗ ಹರಿಪ್ರಸಾದ ಅವರು ಮಾತನಾಡಿದ್ದಾರೆ.

ಅವರು ಸಂಪೂರ್ಣವಾಗಿ ಮಾತನಾಡಿದರೂ ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲಾ, ಇದರಿಂದ ಒಂದು ಗೊತ್ತಾಗುತ್ತದೆ. ಹರಿ ಪ್ರಸಾದ್ ಅವರು ಪ್ರಭಾವ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯ ಅವರು ಬಹಳ ಇಂಡಿಪೆಂಡೆಂಟ್ ಆಡಳಿತ ಮಾಡಿದವರು. ಆದರೆ ಅವರು ಈಗ ಒತ್ತಡದಲ್ಲಿ ಆಡಳಿತ ಮಾಡುತಿದ್ದಾರೆ‌. ಆಂತರಿಕವಾಗಿ ಬಹಳ ಅಡೆತಡೆಯಲ್ಲಿ ಸಿ ಎಂ ಕೆಲಸ ಮಾಡುತಿದ್ದಾರೆ‌.

ಸಿ ಎಂ ಅವರು ಆಡಳಿತದ ಮೇಲೆ ಹಿಡಿತ ಕಳೆದು ಕೊಂಡಿದ್ದಾರೆ. ವರ್ಗಾವಣೆ ದಂದೆ ಅವರ ಮೂಗಿನ ನೇರಕ್ಕೆ ನಡೆದರೂ ಅವರು ಅಸಹಾಯಕರಾಗಿದ್ದಾರೆ.

ರಾಜ್ಯದ ಆರ್ಥಿಕ ದಿವಾಳಿ ಆದರೂ ಅವರು ಏನು ಮಾಡದ ಪರಿಸ್ಥಿತಿಯಲ್ಲಿ ಇದ್ದಾರೆ. ವರ್ಗಾವಣೆ ಸಿ ಎಂ ಕಚೇರಿಯಲ್ಲಿ ನಡೆಯುತ್ತಿದೆ.

ಅದನ್ನು ತಡೆಯುವಲ್ಲಿ ಸಿ ಎಂ ಅಸಹಾಯಕ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಅವರ ಶಾಸಕರು ಅವರ ಆಡಳಿತದ ಬಗ್ಗೆ ಮಾತನಾಡುತ್ತಾರೆ.

ಇದು ಸಿದ್ದರಾಮಯ್ಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.