ಜೇಡ ಕಚ್ಚಿ ಗಾಯಕ ಸಾವು, ಬ್ರೆಜಿಲಿಯನ್ ಸಿಂಗರ್ ಇನ್ನಿಲ್ಲ
ಜೇಡ ಕಡಿತದಿಂದ ಬ್ರೆಜಿಲ್ ಗಾಯಕ ಡಾರ್ಲಿನ್ ಮೊರೈಸ್ ತಮ್ಮ 28 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಜೇಡ ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಆರೋಗ್ಯ ಸುಧಾರಿಸಿಕೊಂಡು ಡಿಸ್ಚಾರ್ಜ್ ಕೂಡಾ ಆಗಿದ್ದರು. ಬಳಿಕ ವಿಪರೀತ ಆಯಾಸದಿಂದ ಬಳಲುತ್ತಿದ್ದರು. ಸಾವಿಗೂ ಮೊದಲು ಅವರ ದೇಹದ ಬಣ್ಣ ಬದಲಾಗಿತ್ತು ಎಂದು ಗಾಯಕನ ಪತ್ನಿ ಹೇಳಿದ್ದಾರೆ. ಅಕಾರ್ಡಿಯನ್, ಜಬುಂಬಾ ಮತ್ತು ಲೋಹದ ವಾದ್ಯಗಳನ್ನು ಬಳಸುವ ಮೂಲಕ ಡಾರ್ಲಿನ್ ಮೊರೈಸ್ ಗುರುತಿಸಿಕೊಂಡಿದ್ದರು.