Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜೋಡೊ ಯಾತ್ರೆಗೆ ಒಂದು ವರ್ಷ:‌ ‘ಈ ಪ್ರಯಾಣವು ಮುಂದುವರಿಯುತ್ತದೆ’ – ರಾಹುಲ್ ಗಾಂಧಿ

ನವದೆಹಲಿ: ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

‘ಭಾರತ ಜೋಡೋ ಯಾತ್ರೆಯು ಏಕತೆ ಮತ್ತು ಪ್ರೀತಿಯ ಕಡೆಗಿನ ಕೋಟ್ಯಂತರ ಹೆಜ್ಜೆಗಳಾಗಿದ್ದು, ದೇಶಕ್ಕೆ ಉತ್ತಮ ನಾಳೆಯ ಅಡಿಪಾಯವಾಗಿದೆ. ದ್ವೇಷವನ್ನು ತೊಲಗಿಸಿ ಭಾರತ ಒಂದಾಗುವವರೆಗೆ ಈ ಪ್ರಯಾಣವು ಮುಂದುವರಿಯುತ್ತದೆ. ಇದು ನನ್ನ ಭರವಸೆಯಾಗಿದೆ ಎಂದಿದ್ದಾರೆ. ಇದರೊಂದಿಗೆ ಭಾರತ್ ಜೋಡೋ ಯಾತ್ರೆಯ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯವಾಗಿತ್ತು. ಈ ಸುದೀರ್ಘ ಪಾದಯಾತ್ರೆಯು ಅಜಮಾಸು 4,000 ಕಿ.ಮೀ ಸಾಗಿ ಬಂದಿತ್ತು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ 130 ದಿನಗಳಿಗೂ ಹೆಚ್ಚು ಕಾಲ ನಡೆದಿತ್ತು.