Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜ.28ರಂದು ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

 

ಚಿತ್ರದುರ್ಗ: 2022-23ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ (ಸಿಎಆರ್ ಮತ್ತು ಡಿಎಆರ್)-3064 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಇದೇ ಜನವರಿ 28ರಂದು ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಚಿತ್ರದುರ್ಗ ನಗರದಲ್ಲಿ ಒಟ್ಟು 25 ಶಾಲಾ, ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕ, ಕೈಬರಹ ಚೀಟಿ, ಪೇಜರ್, ಕ್ಯಾಲ್ಕುಲೇಟರ್, ಇಯರ್‍ಫೋನ್, ಮೊಬೈಲ್‍ಫೋನ್ ಪರೀಕ್ಷೆಗೆ ತರಲು ನಿಷೇಧಿಸಲಾಗಿದೆ.

ಅಭ್ಯರ್ಥಿಗಳು ಬೆಲೆ ಬಾಳುವ ವಸ್ತು, ಸಾಮಾಗ್ರಿ ತರದಂತೆ ತಿಳಿಸಲಾಗಿದ್ದು, ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರು. ಅಭ್ಯರ್ಥಿಗಳಿಗೆ ಕರೆಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್ ಸಹ ಕಳಿಸಲಾಗುವುದು.

ಅಭ್ಯರ್ಥಿಗಳು ಕರೆಪತ್ರ ಡೌನ್‍ಲೋಡ್ ಮಾಡಿಕೊಂಡು ನಿಗಧಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ ಹಾಗೂ ಕರೆಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.