Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಡಾಕ್ಟರ್ ಒಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 1.79 ಲಕ್ಷ ಕಳಕೊಂಡ್ರು.!

 

 

ಹುಬ್ಬಳ್ಳಿ: ಧಾರವಾಡದ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡ ಘಟನೆ ನಡೆದಿದೆ.

ಎರಡು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರ ಫೋನ್ ಕರೆ ಮಾಡಿದ ನಂತರದ ಬೆಳವಣಿಗೆಯಲ್ಲಿ ವೈದ್ಯರು ಹಣ ಕಳೆದುಕೊಂಡಿದ್ದು, ಸದ್ಯ ಈ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೋನ್ ಕರೆ ಮಾಡಿದ್ದ ಸೈಬರ್ ವಂಚಕ, ಹಣಕಾಸು ಸಲಹೆಗಾರ ಎಂದು ಬಿಂಬಿಸಿದ್ದ. ಷೇರು ಮಾರುಕಟ್ಟೆಯಲ್ಲಿ ತನ್ನ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ತಂದುಕೊಡಲಾಗುವುದು ಎಂದು ವೈದ್ಯರನ್ನು ನಂಬಿಸಿದ್ದ. ಹೆಚ್ಚಿನ ಲಾಭಕ್ಕಾಗಿ ‘ಪ್ಲಾನೆಟ್ ಇಮೇಜ್ ಇಂಟರ್ನ್ಯಾಷನಲ್’ ಕಂಪನಿಯ ಐಪಿಒ ದಲ್ಲಿ ಹೂಡಿಕೆ ಮಾಡಲು ವೈದ್ಯರಿಗೆ ಸಲಹೆ ನೀಡಿದ್ದ. ಆತನ ಸಲಹೆಯನ್ನು ನಂಬಿದ ವೈದ್ಯರು ಆತನ ಸಾಮಾಜಿಕ ಮಾಧ್ಯಮ ತಾಣಕ್ಕೆ ಸೇರಿಕೊಂಡಿದ್ದಾರೆ. ನಂತರ ವೈದ್ಯರಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ವಂಚಕರು 1.79 ಕೋಟಿ ರೂ. ತೆಗೆದಿದ್ದಾರೆ.!