Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಡಾ. ಕೆ. ಜೈಮುನಿ ಇವರಿಗೆ ಯೋಗ ಬುಕ್ ಆಫ್ ರೆಕಾರ್ಡ್

 

ದಾವಣಗೆರೆ : ಅಖಿಲ ಭಾರತೀಯ ಯೋಗ ಮಹಾಸಂಘ ಜೈಪುರ್ ಇವರು  ಆಗಸ್ಟ್ 15 – 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ದೇಶಾದ್ಯಂತ ನಡೆಸಿದ ಆನ್ ಲೈನ್ ಯೋಗಾಸನ ಸ್ಪರ್ಧೆಯಲ್ಲಿ  ವೀರಭದ್ರಸನ (2) ರಾಷ್ಟ್ರಧ್ವಜವನ್ನು ಹಿಡಿದು ಒಂದು ನಿಮಿಷಗಳ ಕಾಲ ಆ ಭಂಗಿಯಲ್ಲಿ  ನಿಲ್ಲಿಸಿ ಸಾಧನೆ ಮಾಡಿರುತ್ತಾರೆ ಆದ್ದರಿಂದ ಜೈಪುರದ ಯೋಗ ಮಹಾಸಂಘ ಸಂಸ್ಥೆಯು ಡಾ. ಕೆ. ಜೈಮುನಿ ಇವರಿಗೆ ಯೋಗ ಬುಕ್ ಆಫ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.

ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ,  ಹರಿಹರ ಕ್ಷೇತ್ರ  ಶಾಸಕ ಬಿ.ಪಿ. ಹರೀಶ್, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ ಹಾಗೂ ನಗರಸಭೆ ಸದಸ್ಯರಾದ ಶಂಕರ್   ಖಟಾವ್ಕರ್ , ಜಿಲ್ಲಾ ಕ್ರೀಡಾ ಒಕ್ಕೂಟದ ಅಧ್ಯಕ್ಷರಾದ ಕೆ. ದಿನೇಶ್ ಶೆಟ್ಟಿ , ಜಿಲ್ಲಾ ಕಾರ್ಯ ನಿರತ ಪತ್ರಕರ್ತರಸಂಘದ ಅಧ್ಯಕ್ಷರಾದ  ಇ. ಎಂ. ಮಂಜುನಾಥ ಹಾಗೂ  ವರದಿಗಾರ ಕೂಟದ ಅಧ್ಯಕ್ಷರಾದ ಕೆ. ಏಕಾಂತಪ್ಪ, ದಾವಣಗೆರೆ ಯೋಗ ಒಕ್ಕೂಟದ ಅಧ್ಯಕ್ಷರಾದ ವಾಸುದೇವರಾಯ್ಕ್ರರ್‌ ಮತ್ತು ಸಂಘ ಸಂಸ್ಥೆಗಳು ಶುಭವನ್ನು ಕೋರಿದ್ದಾರೆ.