Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಡಿಕೆಶಿ ಪರ 70 ಶಾಸಕರಿದ್ದೇವೆ, ಅವರು ಸಿಎಂ ಆಗಲಿದ್ದಾರೆ’ – ಶಾಸಕ ಶಿವಗಂಗಾ ಬಸವರಾಜ್

ಬೆಂಗಳೂರು: “ಇದೇ ಅವಧಿಯಲ್ಲಿ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಗಳಾಗುತ್ತಾರೆ. ಅವರ ಪರ 70 ಮಂದಿ ಶಾಸಕರಿದ್ದೇವೆ” ಎಂಬ ಚೆನ್ನಗಿರಿ ಕಾಂಗ್ರೆಸ್‌ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನನ್ನಂತೆ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 70 ಮಂದಿಯೂ ಅವರ ಪರವಾಗಿ ಇದ್ದೇವೆ. ಡಿಕೆಶಿಯವರು ಒಂದು ವರ್ಷದಲ್ಲಿ ಅಥವಾ ೨ ವರ್ಷದಲ್ಲಿ ಆಗಬಹುದು. ಒಟ್ಟಿನಲ್ಲಿ ಶಿವಕುಮಾರ್‌ ಅವರು ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮಂತಹ 70 ಮಂದಿ ಪ್ರಥಮ ಬಾರಿಗೆ ಶಾಸಕರಾಗಲು, ಅವರ ಸಂಘಟನೆ ಕಾರಣವಾಗಿದೆ. ಈ ಕಾರಣಕ್ಕೆ ನಾವು ಅವರ ಪರ ಇದ್ದೇವೆ. ಶಿವಕುಮಾರ್‌ ಅವರಿಗೂ ಜಾತಿ ಅಧಾರದ ಮೇಲೆ ಡಿಸಿಎಂ ಹುದ್ದೆ ನೀಡಿಲ್ಲ. ಅವರ ಸಂಘಟನೆ, ಪರಿಶ್ರಮ ನೋಡಿ ಅವರಿಗೆ ಡಿಸಿಎಂ ಹುದ್ದೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶಾಸಕ ಬಸವರಾಜ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿವಕುಮಾರ್‌ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಸುದ್ದಿಯಾಗಿದ್ದರು.