Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಡಿಪ್ಲೊಮಾ, ಐಟಿಐ ಪಾಸಾದವರ ಅಪ್ರೆಂಟಿಸ್ ಮೇಳ

 

    ದಾವಣಗೆರೆ: ಹರಿಹರದ ಎಪಿಎಂಸಿ ಬಳಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಡಿಪ್ಲೊಮಾ, ಐಟಿಐ ಪಾಸಾದವರಿಗೆÉ ಏರ್ಪಡಿಸಲಾದ ಜಿಲ್ಲಾ ಮಟ್ಟದ ರಾಷ್ಟ್ರೀಯ ಅಪ್ರೆಂಟಿಸ್ ಮೇಳವನ್ನು ಫೆಬ್ರವರಿ 19 ಕ್ಕೆ ಮುಂದೂಡಲಾಗಿದೆ.

ಈ ಶಿಶಿಕ್ಷು ಮೇಳದಲ್ಲಿ ಜಿಲ್ಲೆಯ  ಐ.ಟಿ.ಐ, ಡಿಪ್ಲೋಮಾ ಪಾಸ್ ಆದ ನಿರುದ್ಯೋಗಿ ಯುವಕ, ಯುವತಿಯರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ  ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9480085001, 9945049894, 9743104863 ಸಂಪರ್ಕಿಸಲು  ಸ.ಕೈ.ತ.ಸಂಸ್ಥೆ ಪ್ರಾಂಶುಪಾಲರಾದ ಜಯಪ್ಪ ಎಂ. ತಿಳಿಸಿದ್ದಾರೆ.