Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ತಮಿಳಿಗಾಗಿ ರೈಲು ಹಳಿ ಮೇಲೆ ತಲೆ ಇಟ್ಟ ಕಲಾವಿದನ ಮೊಮ್ಮಗ ನಾನು, ಜೀವ ಬೆದರಿಕೆಗೆ ಹೆದರುವುದಿಲ್ಲ’- ಉದಯನಿಧಿ

ಚೆನ್ನೈ: ಅಯೋಧ್ಯೆಯ ಸ್ವಾಮೀಜಿಯೊಬ್ಬರು ತಮಗೆ ಜೀವ ಬೆದರಿಕೆ ಒಡ್ಡಿರುವ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಕ್ರೀಡಾ ಸಚಿವ  ಉದಯನಿಧಿ ಸ್ಟಾಲಿನ್,ತಮಿಳಿಗಾಗಿ ರೈಲು ಹಳಿ ಮೇಲೆ ತಲೆ ಇಟ್ಟ ಕಲಾವಿದನ ಮೊಮ್ಮಗ ನಾನು. ಇದು ನಮಗೆ ಹೊಸದಲ್ಲ. ಈ ಎಲ್ಲಾ ಬೆದರಿಕೆಗಳಿಗೆ ನಾವು ಹೆದರುವವರಲ್ಲ ಎಂದು ಹೇಳಿದ್ದಾರೆ.

“ಸನಾತನ ಧರ್ಮ” ಕುರಿತು ಉದಯನಿಧಿ ನೀಡಿರುವ ಹೇಳಿಕೆಗೆ ಹಲವು ಹಿಂದೂ ಸ್ವಾಮೀಜಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ತಪಸ್ವಿ ಧವನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ ಜೀವ ಬೆದರಿಕೆ ಹಾಕಿದ್ದಾರೆ.

ಉದಯನಿಧಿ ತಲೆ ಕಡಿದು ತಂದುಕೊಟ್ಟವರಿಗೆ 10 ಕೋಟಿ ರೂ ಬಹುಮಾನವನ್ನು ನೀಡುತ್ತೇನೆ. ಯಾರೂ ಉದಯನಿಧಿನನ್ನು ಕೊಲ್ಲುವ ಧೈರ್ಯ ಮಾಡದಿದ್ದರೆ ನಾನೇ ಆತನನ್ನು ಪತ್ತೆ ಮಾಡಿ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದರು

ಈ ಕುರಿತು ಕಾರ್ಯಕ್ರಮೊಂದರಲ್ಲಿ ಮಾತನಾಡಿದ ಉದಯನಿಧಿ, ಸ್ವಾಮೀಜಿ ಈ ಹಿಂದೆಯೂ ಕೂಡ ವಿವಾದಿತ ಹೇಳಿಕೆ ನೀಡಿದ್ದು,’ ಪಠಾಣ್’ ಚಿತ್ರಕ್ಕೆ ಸಂಬಂಧಿಸಿದಂತೆ ನಟ ಶಾರುಕ್ ಖಾನ್ ಅವರನ್ನು ಜೀವಂತ ಸುಡುತ್ತೇನೆ ಎಂದಿದ್ದರು.