Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಮಿಳುನಾಡು: ಬಾಲಕಿ ಮೇಲೆ ದಾಳಿ ಮಾಡಿದ ಹಸು… ವಿಡಿಯೋ ವೈರಲ್

ತಮಿಳುನಾಡು : ಶಾಲೆಯಿಂದ ಬರುತ್ತಿದ್ದ ಬಾಲಕಿಯೊಬ್ಬಳ ಮೇಲೆ ದನವೊಂದು ದಾಳಿ ಮಾಡಿದ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ.

ಬಾಲಕಿ ತಾಯಿ ಹಾಗೂ ತನ್ನ 5 ವರ್ಷದ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿರುವಾಗ ಎರಡು ಹಸುಗಳು ಬಂದಿವೆ, ಅದರಲ್ಲಿ ಒಂದು ಹಸು ಬಾಲಕಿ ಮೇಲೆ ಕೋಡಗಿನಿಂದ ತಿವಿದು, ಕಾಲಿನಿಂದ ಮೆಟ್ಟಿ ದಾಳಿ ನಡೆಸಿ ಅರೆ ಜೀವ ಮಾಡಿದೆ.

ಆಕೆಯ ತಾಯಿ ಮಗಳ ಸಹಾಯಕ್ಕೆಂದು ಮುಂದಾದರೂ ಆ ಹಸು ತಾಯಿಯನ್ನು ಗದರಿಸಿ ಬಾಲಕಿ ಮೇಲೆ ದಾಳಿ ಮಾಡಿದೆ. ಕೊನೆಗೆ ಅಲ್ಲಿದ್ದವರು ಕಲ್ಲು, ಇಟ್ಟಿಗೆಗಳನ್ನು ಹಸುವಿನ ಮೇಲೆಸದರೂ ಯಾವುದೇ ಪ್ರಯೋಜನವಾಗಲಿಲ್ಲ, ಮಧ್ಯದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಕಲ್ಲೆಸೆದು ಬಾಲಕಿಯನ್ನು ರಕ್ಷಿಸಬೇಕು ಎಂದುಕೊಂಡು ಬಾಲಕಿಯನ್ನು ಎಳೆದುಕೊಳ್ಳುವಷ್ಟರಲ್ಲಿ ಮತ್ತೆ ದಾಳಿ ನಡೆಸಿದೆ.
ತಕ್ಷಣವೇ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಬಾಲಕಿಯನ್ನು ಆಯೆಷಾ ಎಂದು ಹೇಳಲಾಗುತ್ತಿದೆ, ಈ ಘಟನೆ ಆಗಸ್ಟ್ 9ಕ್ಕೆ ನಡೆದಿದ್ದು, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.