Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತರಕಾರಿ ಬೆನ್ನಲ್ಲೇ ಮೀನುಗಳ ಬೆಲೆ ಏರಿಕೆ

ಬೆಂಗಳೂರು : ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆಯಾಗಿದೆ.ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಮಾಡಲಾಗಿದೆ. ಹಿಂದೆ ಮಂಗಳೂರು, ಮಲ್ಪೆ, ಕಾರವಾರ, ದಂಗೊಡ್ಡಿ, ಭಟ್ಕಳ ಭಾಗದಿಂದ ಮೀನುಗಳು ಬರುತ್ತಿತ್ತು.ಸದ್ಯ ಮೀನುಗಾರಿಕೆಗೆ ನಿರ್ಬಂಧ ಹಿನ್ನೆಲೆ, ರಾಜ್ಯಕ್ಕೆ ಹೊರ ರಾಜ್ಯಗಳಿಂದ‌ ಮೀನು ರಫ್ತು ಆಗ್ತಿದೆ.ಒರಿಸ್ಸಾ, ವಿಶಾಖಪಟ್ಟಣಂ, ನಾಗಪಟ್ಟಣಂ, ಕನ್ಯಾಕುಮಾರಿ, ಕೇರಳ ಭಾಗದಿಂದ ಮೀನು ರಫ್ತಾಗ್ತಿದೆ. ಮೀನಿನ ತಳಿಗಳು ಎಷ್ಟೆಷ್ಟು ದರ? ಅಂತಾ ನೋಡೋದಾದ್ರೆ* ಇಂದಿನ ದರ ಹಾಗೂ ಹಳೆಯ ದರ (ಕೆಜಿ- ರೂ.ಗಳಲ್ಲಿ) ಬಂಗುಡೆ 350- 120 ಬೂತಾಯಿ 250 -140 ಕಪ್ಪು ಮಾಂಜಿ 1000 -600 ಬಿಳಿ ಮಾಂಜಿ 1020 -600 ಮದಿಮಾಲ್ 570 -250 ಕೊಡ್ಡಾಯಿ 450 -250 ಕಾಣಿ 600-400 ಇಂಡಿಯನ್ ಸಾಲ್ಮನ್ 910-650 ಸೀ ಪ್ರಾನ್ಸ್​ 650 -500 ಟ್ಯೂನಾ 380 -250 ಕ್ರಾಬ್ 450 -300 ಸಿಲ್ವರ್ ಫಿಶ್ 250- 180 ಕೆರೆ ಮೀನು 200 -180 ಬರಗುಡ 450 -300