ತರಬೇತಿ ವಿಮಾನ ಪತನ – ಪೈಲಟ್, ತರಬೇತುದಾರರು ಸಣ್ಣಪುಟ್ಟ ಗಾಯಗಳಿಂದ ಪಾರು
ಪುಣೆ: ಪುಣೆ ಜಿಲ್ಲೆಯ ಗೊಜುಬಾವಿ ಗ್ರಾಮದ ಬಳಿ ತರಬೇತಿ ಅವಧಿಯಲ್ಲಿ ವಿಮಾನವೊಂದು ಪತನಗೊಂಡು ಪೈಲಟ್ ಮತ್ತು ತರಬೇತುದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ನಡೆದಿದೆ.
ರೆಡ್ ಬರ್ಡ್ ಅಕಾಡೆಮಿ ಟೆಕ್ನಾಮ್ ವಿಮಾನವು ಬಾರಾಮತಿ ಏರ್‌ಫೀಲ್ಡ್ ಬಳಿ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್ ಮತ್ತು ತರಬೇತುದಾರರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ.
ಇನ್ನು ಕಳೆದ ಗುರುವಾರ ಪುಣೆಯಲ್ಲಿ ಇದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು ಇಬ್ಬರು ಜನರಿದ್ದ ತರಬೇತಿ ವಿಮಾನ ಪತನಗೊಂಡಿತ್ತು ಎಂದು ಹೇಳಲಾಗಿದೆ.