ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ನಟಿ ಅಮಲಾಪೌಲ್
ಬೆಂಗಳೂರು: ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೊಶೂಟ್ವೊಂದನ್ನು ಶೇರ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಇದೀಗಾ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರೊಂದಿಗೆ ನಾವು ಒನ್ ಪ್ಲಸ್ ಒನ್ ಈಕ್ವಲ್ ತ್ರೀ (1+1=3) ಎಂದು ಶೀರ್ಷಿಕೆ ಕೂಡ ಬರೆದುಕೊಂಡಿದ್ದಾರೆ. ಇನ್ನು ನಟಿಯ ಈ ಪೋಸ್ಟ್ಗೆ ನಟ, ನಟಿಯರು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಕೋರಿದ್ದಾರೆ.
ನಟಿ ಅಮಲಾ ಪೌಲ್ ಅವರು ೨೦೧೪ ರಲ್ಲಿ ತಮಿಳು ನಿರ್ದೇಶಕ ಎ ಎಲ್ ವಿಜಯ್ ಜೊತೆ ವಿವಾಹವಾದರೂ. ಆದರೆ ವಿಜಯ್ ಅವರ ಪೋಷಕರೊಟ್ಟಿಗೆ ಅಮಲಾ ಪೌಲ್ ಗೆ ಭಿನ್ನಾಭಿಪ್ರಾಯ ಏರ್ಪಟ್ಟ ಕಾರಣ 2014ರಲ್ಲಿ ಹಸೆಮಣೆ ಏರಿದ್ದ ಅಮಲಾ ಅವರು 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ಅಮಲಾ ಹಾಗೂ ಜಗತ್ ದೇಸಾಯಿ ಕೆಲಕಾಲ ಪ್ರೀತಿಯಲ್ಲಿದ್ದರು. ಅಂತಿಮವಾಗಿ ಕಳೆದ ನವೆಂಬರ್ನಲ್ಲಿ ಎರಡನೇ ಮದುವೆಯಾಗಿದ್ದರು.ಇದೀಗಾ ವಿವಾಹವಾದ 2 ತಿಂಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.