ತಿಮ್ಮಪ್ಪನ ಭಕ್ತರು ಈ ದಿನ ಹೋದ್ರೆ ಸಿಗಲ್ಲ ದರ್ಶನ.!
ಹೈದರಬಾದ್: ಇದೇ ಅ.29ರಂದು ಬೆಳಗ್ಗೆ ಭಾಗಶಃ ಚಂದ್ರಗ್ರಹಣ ಇರಲಿದೆ. ಈ ಕಾರಣಕ್ಕಾಗಿ ಅ.28ರ ಸಾಯಂಕಾಲ 7-05ಕ್ಕೆ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮರಳಿ ಅ.29ರಂದು 1-05 (AM) ನಂತರ ಗ್ರಹಣ ಪೂರ್ಣಗೊಂಡ ಬಳಿಕ ಶ್ರೀವಾರಿಯ ದೇವಸ್ಥಾನವನ್ನು ತೆರೆಯಲಾಗುತ್ತದೆ ಎಂದು ಭಕ್ತರ ಗಮನಕ್ಕೆ ತರಲಾಗಿದೆ. ಈ ಅವಧಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಪ್ಲಾನ್ ಇದ್ದರೆ ಈಗಲೇ ರದ್ದು ಮಾಡಿಕೊಳ್ಳಬಹುದು.