Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತುಮಕೂರು: ಶಾಲಾ ಬಸ್ ಪಲ್ಟಿ – ಮೂವರು ಮಕ್ಕಳಿಗೆ ಗಂಭೀರ ಗಾಯ

ತುಮಕೂರು: ತುಮಕೂರು ಹೊರವಲಯದ ಅಂತರಸನಹಳ್ಳಿ ಗ್ರಾಮದ ಬಳಿ ಖಾಸಗಿ ಶಾಲೆಯ ಬಸ್‌ವೊಂದು ಮಂಗಳವಾರ ಸಂಜೆ ಪಲ್ಟಿಯಾಗಿ 3 ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಏಳನೇ ತರಗತಿಯ ಲಿಖಿತ, ವಿಸ್ಮಿತ್, ಅನಂತಗೌಡ ಗಾಯಗೊಂಡ ಮಕ್ಕಳಾಗಿದ್ದು, ಬಸ್‌ನಲ್ಲಿ 30ಕ್ಕೂ ಹೆಚ್ಚು ಮಕ್ಕಳು ಇದ್ದರು ಎನ್ನಲಾಗಿದೆ. ಈ ಸಂಬಂಧ ತುಮಕೂರು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.