ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
ಹೊಸಪೇಟೆ: ಹೊಸಪೇಟೆ ತಾಲ್ಲೂಕಿನ ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಹಾಯಧನ ಪಡೆಯಲು ನೀರಾವರಿ ಸೌಲಭ್ಯವುಳ್ಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಸಣ್ಣ, ಅತೀ ಸಣ್ಣ ರೈತರಿಗೆ ಹಾಗೂ ಬಿ.ಪಿ.ಎಲ್ ಸೌಲಭ್ಯ ಕಾರ್ಡ್ ಹೊಂದಿರುವ ರೈತರಿಗೆ ವಿವಿಧ ಬಗೆಯ ಹಣ್ಣಿನ ಬೆಳೆಗಳಾದ ದಾಳಿಂಬೆ, ಬಾಳೆ, ಡ್ರಾಗನ್ ಪ್ರೂಟ್ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಯನ್ನು ಬೆಳೆಯಲು ಅವಕಾಶವಿರುತ್ತದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಪಿ.ಎಂ.ಕೆ.ಎಸ್.ವೈ) ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ, ತೋಟಗಾರಿಕೆ ಯಂತ್ರೋಪಕರಣಗಳ ಖರೀದಿ, ಆಳವಡಿಕೆಗೆ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ ಸ್ಥಾಪನೆಗಾಗಿ ಸಹಾಯಧನ ಪಡೆಯಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಕೆ.ಎಮ್ ಮೊ.ಸಂ: 8310291867, ಹೋಬಳಿ ಮಟ್ಟದ ಅಧಿಕಾರಿಗಳಾದ ರೈ.ಸಂ.ಕೇAದ್ರ ಹೊಸಪೇಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಸುಧಾಕರ ಮೊ.ಸಂ: 9739027284, ಕಮಲಾಪುರ ರೈ.ಸಂ.ಕೇAದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ವೀರೇಶ ಎಸ್.ಎಮ್ ಮೊ.ಸಂ: 8123465548, ಮರಿಯಮ್ಮನಹಳ್ಳಿ ರೈ.ಸಂ.ಕೇAದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ರಾಹೀಲ್ ಕೆ. ಮೊ.ಸಂ: 8073719905, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಕೆ.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.