ತ್ರಿವಿಧ ದಾಸೋಹದಲ್ಲಿ ಆರೋಗ್ಯ ಸೇವೆ ಆದರ್ಶಪ್ರಾಯ: ಗಾಣಿಗ ಗುರುಪೀಠದ ಪೀಠಾಧ್ಯಕ್ಷಡಾ. ಬಸವಕುಮಾರ ಶ್ರೀ
ಹರಿಹರ: ಅಕ್ಷರ ದಾಸೋಹ ಮತ್ತು ಅನ್ನ ದಾಸೋಹದಲ್ಲಿ ನಿರತರಾಗಿರುವ ಶ್ರೀ ವೇಮನಾನಂದ ಶ್ರೀಗಳ ಮಠ ಮತ್ತು ವಿದ್ಯಾಸಂಸ್ಥೆಯಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿರುವ ಡಾ. ಟಿ.ಜಿ. ರವಿಕುಮಾರ್ ಅವರ ಕಾರ್ಯ ಆದರ್ಶವಾದುದು ಎಂದು ಗಾಣಿಗ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಕುಮಾರ ಸ್ವಾಮೀಜಿಯವರು ಹೇಳಿದರು.
ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಹಾಮಠದ ಪೀಠಾಧ್ಯಕ್ಷರಾದ ಶ್ರೀ ವೇಮನಾನಂದ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ಪ್ರೀತಿ ಆರೈಕೆ ಟ್ರಸ್ಟ್ ಸಹಯೋಗzಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ವೇಮನಾನಂದ ಶ್ರೀಗಳು ಯಾವುದೇ ಅನುದಾನಗಳ ವ್ಯಾಮೋಹ, ಪ್ರಚಾರದ ಹಪಾಹಪಿ, ಆಡಂಬರ, ಅಬ್ಬರವಿಲ್ಲದೆಯೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರ ಜನ್ಮದಿನದಂದು ಕೂಡ ಸಭಾ ಕಾರ್ಯಕ್ರಮಕ್ಕೆ ಬರದೇ ತಮ್ಮದು ಭಕ್ತಿಸೇವೆಗೆ ಮೀಸಲಾದ ಬದುಕು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿ, ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಜಗಳೂರು ಮಾಜಿ ಶಾಸಕರಾದ ಟಿ. ಗುರುಸಿದ್ದನಗೌಡ , ಆರೈಕೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ಟಿ.ಜಿ. ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಜಿ ಆಸ್ಪತ್ರೆಯ ಡಾ. ಅಕ್ಷಯಕುಮಾರ್, ಭಾನುವಳ್ಳಿ ಆರೋಗ್ಯ ಕೇಂದ್ರದ ಡಾ. ತಿಪ್ಪೇಸ್ವಾಮಿ, ದೇವರಬೆಳಕೆರೆ ಆಸ್ಪತ್ರೆಯ ಡಾ. ನವ್ಯ, ಹಿರಿಯ ಆರೋಗ್ಯಾಧಿಕಾರಿ ವಿಮ್ಮಣ್ಣ, ವೈದ್ಯಾಧಿಕಾರಿ ನಾಗರಾಜ, ಬಿಳಸ್ನೂರು ಆರೋಗ್ಯ ಕೇಂದ್ರದ ಡಿ. ಮಂಜುನಾಥ್ ಮತ್ತು ಕಾರ್ಲಿನ, ಹೇಮ ವೇಮ ಸದ್ಬೋದನ ವಿದ್ಯಾಪೀಠದ ಆಡಳಿತಾಧಿಕಾರಿ ಸುಭಾಷ್ ಎಚ್.ಪಿ. ಸಂಸ್ಥೆಯ ಸಿಇಒ ಕುಂಜು ಅಶೋಕ್ ರಾಜ್, ಅಜರುದ್ದೀನ್, ಪ್ರೀತಿ ಆರೈಕೆಟ ಟ್ರಸ್ಟಿನ ಡಾ. ಶಾಹೀದ್, ವಿನೋದ್ ಕುಮಾರ್, ನುಂಕೇಶ್ ಆರ್.ಕೆ ಸೇರಿದಂತೆ ಹಲವರಿದ್ದರು.