Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದಕ್ಷಿಣ ಆಫ್ರಿಕಾದಲ್ಲಿ ವಿಷಾನಿಲ ಸೋರಿಕೆ; ಮಕ್ಕಳು ಸೇರಿ 16 ಮಂದಿ ಸಾವು

ಜೋಹಾನ್ಸ್‌’ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌’ಬರ್ಗ್‌ನ ಸಮೀಪ ಸಿಲಿಂಡರ್‌ ನಿಂದ ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಹಾನ್ಸ್‌ ಬರ್ಗ್ ಪೂರ್ವ ಹೊರವಲಯದ ಬೋಕ್ಸ್‌ ಬರ್ಗ್ ನಗರದಲ್ಲಿ ದುರಂತ ಸಂಭವಿಸಿದೆ. ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಈ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಎಮರ್ಜನ್ಸಿ ಸರ್ವಿಸ್‌ ನ ಮಗದೊಂದು ವರದಿ ತಿಳಿಸಿದೆ.

ಕುಂದಾಪುರ: ಧಾರಾಕಾರ ಮಳೆಗೆ ಬಸ್ – ಕ್ಯಾಂಟರ್ ಢಿಕ್ಕಿ;ಬಸ್ ಚಾಲಕ ಸಹಿತ 8 ಮಂದಿಗೆ ಗಾಯ

ಈ ಸಂಬಂಧ ಇನ್ನಷ್ಟೇ ಸ್ಪಷ್ಟ ಚಿತ್ರಣ ಲಭಿಸಬೇಕಿದೆ. ಅನಿಲ ಸೋರಿಕೆ ನಿಂತಿದ್ದು, 100 ಮೀಟರ್ ಅಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಮರ್ಜನ್ಸಿ ಸರ್ವಿಸ್ ವಕ್ತಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಅನಿಲ ಸಿಲಿಂಡರ್‌ ಅನ್ನು ಗುಡಿಸಲಿನೊಳಗೆ ಅಕ್ರಮವಾಗಿ ಚಿನ್ನ ಸಂಸ್ಕರಣೆ ಮಾಡಲು ಬಳಕೆ ಮಾಡುತ್ತಿದ್ದರು. ಇದು ಯಾವ ವಿಧದ ಅನಿಲ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಜೋಹಾನ್ಸ್‌ ಬರ್ಗ್ ಸುತ್ತಮುತ್ತಲಿನಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿಯಾಗಿದೆ.