Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದಪ್ಪಗೆ ಕಾಣುತ್ತಿದ್ದೀರಾ..? ಸ್ಲಿಮ್ ಆಗಿ ಕಾಣಬೇಕಾ..? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ

ಇನ್ನು ಮುಂದೆ, ದೇಹದ ತೂಕ ಇಳಿಸಿಕೊಳ್ಳುವ ಭರದಲ್ಲಿ ಊಟ ಮಾಡದೇ ಇರುವುದು, ಕಡಿಮೆ ಊಟ ಮಾಡುವುದು, ದಿನಪೂರ್ತಿ ಉಪವಾಸವಿರುವುದು ಮಾಡಬೇಡಿ..!

ದೇಹದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ಪಾಸಾದರೆ, ಹಲವರು ಜನರು ಫೈಲ್ ಆಗಿದ್ದಾರೆ! ಏಕೆಂದರೆ ತಾವು ಅಂದುಕೊಂಡ ಪ್ರಮಾಣದಲ್ಲಿ ಫಲಿತಾಂಶ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಮಧ್ಯದಲ್ಲಿ ತಾವು ಅನುಸರಿಸುತ್ತಿರುವ ಎಲ್ಲಾ ರೂಲ್ಸ್‌ ಗಳನ್ನು ಕೂಡ ನಿಲ್ಲಿಸಿ ಬಿಡುತ್ತಾರೆ!

ಇನ್ನು ಕೆಲವರು ದೇಹದ ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಹುಮ್ಮಸ್ಸಿನಿಂದ, ಪ್ರಯತ್ನ ಮಾಡುತ್ತಾರೆ, ಆದರೆ ದಿನಾ ಹೋದ ಹಾಗೆ, ಇವೆಲ್ಲಾ ನಮ್ಮಿಂದ ಆಗಲ್ಲಪ್ಪಾ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾರೆ!

ತೂಕ ಕಡಿಮೆ ಮಾಡುವ ವಿಧಾನ…

ಮೊದಲಿಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು, ನಾವು ದಿನನಿತ್ಯ ಸೇವಿಸುವ ಆಹಾರ, ಹಾಗೂ ನಡೆದುಕೊಳ್ಳುವ ಜೀವನಶೈಲಿಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು.

ಆದಷ್ಟು ಪ್ರೋಟೀನ್, ನಾರಿನಾಂಶ ಹಾಗೂ ಕಡಿಮೆ ಕ್ಯಾಲೋರಿ ಇರುವ ಆಹಾರ ಗಳನ್ನು ಸೇವಿಸಬೇಕು. ಬನ್ನಿ ಇಂದಿನ ಲೇಖನ ದಲ್ಲಿ, ತೂಕ ಇಳಿಸಲು, ತಜ್ಞರು ಸೂಚಿಸಿರುವ ಕೆಲ ವೊಂದು ಆಹಾರ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ, ಮುಂದೆ ಓದಿ…​

ಬೇಯಿಸಿದ ಮೊಟ್ಟೆ

ಮೊಟ್ಟೆ ತನ್ನಲ್ಲಿ ಅತಿ ಹೆಚ್ಚು ಪೌಷ್ಟಿಕ ಸತ್ವಗಳನ್ನು ಒಳಗೊಂಡಿ ರುವ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ತೂಕ ಇಳಿಕೆಯ ಪ್ರಯತ್ನದಲ್ಲಿರುವ, ಜನರಿಗೆ ಮೊಟ್ಟೆ ಸೂಕ್ತ ಆಹಾರವಾಗಿದೆ.

ಇನ್ನು ಪ್ರಮುಖವಾಗಿ ಮೊಟ್ಟೆಯಲ್ಲಿ ಪ್ರೋಟೀನ್ ಪ್ರಮಾಣ ಅಧಿಕ ಪ್ರಮಾಣ ಕಂಡು ಬರುವುದರ ಜೊತೆಗೆ, ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ.

ಇವು ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವುದು ಮಾತ್ರ ವಲ್ಲದೆ, ದೇಹದ ತೂಕವನ್ನು ಸಹ ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗಿನ ಜಾವ ಒಂದು ಬೇಯಿಸಿದ ಮೊಟ್ಟೆ ಸೇವನೆ ಮಾಡಿ.

ಮೆಂತೆ ಕಾಳಿನ ನೀರು

ಆಯುರ್ವೇದದಲ್ಲಿ ಮೆಂತೆಕಾಳಿನ ನೀರನ್ನು ಮಧುಮೇಹ ಸಹಿತ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸ ಲಾಗುತ್ತದೆ. ಇನ್ನು ಅಧ್ಯಾಯನದ ವರದಿಯ ಪ್ರಕಾರ, ಮೆಂತೆ ಕಾಳಿನ ನೀರಿನಲ್ಲಿ, ದೇಹದ ತೂಕ ಇಳಿಸುವ ಗುಣ ಲಕ್ಷಣಗಳು ಕೂಡ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ.

ಇದಕ್ಕೆ ಪ್ರಮುಖ ಕಾರಣ, ಈ ಪುಟ್ಟ ಬೀಜಗಳಲ್ಲಿ ಅತ್ಯಧಿಕ ಮಟ್ಟದ ನಾರಿನಾಂಶ ಕಂಡು ಬರುವುದರಿಂದ, ತಿನ್ನುವ ಬಯಕೆ ಯನ್ನು ಕಡಿಮೆ ಮಾಡುವುದು ಮತ್ತು ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಿ, ಹೊಟ್ಟೆ ತುಂಬಿರುವಂತೆ ಮಾಡು ವುದು

ಹೀಗೆ ಮಾಡಿ: ಒಂದು ಟೀ ಚಮಚ ಆಗುವಷ್ಟು ಮೆಂತೆಕಾಳಿನ ಪುಡಿಯನ್ನು, ಉಗುರು ಬೆಚ್ಚಗಿನ ಬಿಸಿ ನೀರಿನೊಂದಿಗೆ ಮಿಕ್ಸ್ ಮಾಡಿ, ದಿನಾ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಉತ್ತಮ ಫಲಿತಾಂಶಕ್ಕಾಗಿ ಒಂದು ತಿಂಗಳು ಈ ಟ್ರಿಕ್ಸ್ ಅನುಸರಿಸಬೇಕು.​

ಬೀನ್ಸ್

ದೇಹದ ತೂಕ ನಿಯಂತ್ರಣ ಮಾಡುವಲ್ಲಿ, ಬೀನ್ಸ್ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

ಪ್ರಮುಖವಾಗಿ ಈ ತರಕಾರಿಯಲ್ಲಿ ಅಧಿಕ ಪ್ರಮಾಣದಲ್ಲಿ ನಾರಿ ನಾಂಶ ಇರುವ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ. ಹೀಗಾಗಿ ದೇಹದ ತೂಕ ಇಳಿಸಿ ಕೊಳ್ಳಲು ಬಯಸುವವರು, ಆಹಾರ ಕ್ರಮದಲ್ಲಿ ಬೀನ್ಸ್ ಸೇರಿಸಿ ಕೊಂಡರೆ ಒಳ್ಳೆಯದು.

ಡ್ರೈ ಫ್ರೂಟ್ಸ್

ಪ್ರಮುಖವಾಗಿ ಡ್ರೈಫ್ರೂಟ್ಸ್ ಗಳಲ್ಲಿ ಪ್ರೋಟಿನ್ ಹಾಗೂ ನಾರಿ ನಾಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಕೆಲವೊಂದು ಡ್ರೈಫ್ರೂಟ್ಸ್‌ಗಳನ್ನು (ಬಾದಾಮಿ, ವಾಲ್ನಟ್ಸ್, ಒಣ ಅಂಜೂರ) ಪ್ರತಿದಿನ ನೆನೆಸಿಟ್ಟು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.

ಇದರಿಂದಾಗಿ ಪದೇ ಪದೇ ಹೊಟ್ಟೆ ಹಸಿವು ಹಾಗೂ ತಿನ್ನುವ ಬಯಕೆ ನಿಯಂತ್ರಣಕ್ಕೆ ಬರುತ್ತದೆ. ಇದರಿಂದಾಗಿ ಕೂಡ ದೇಹದ ತೂಕ, ಕ್ರಮೇಣವಾಗಿ ನಿಯಂತ್ರಣ ಬರುತ್ತದೆ.​

ಮೊಳಕೆ ಭರಿಸಿದ ಕಾಳುಗಳು

ದೇಹದ ತೂಕ ಇಳಿಸಲು ಬಯಸುವವರು, ತಮ್ಮ ಡಯೆಟ್ ನಲ್ಲಿ ಮೊಳಕೆ ಭರಿಸಿದ ಕಾಳು ಗಳನ್ನು ಕೂಡ ಆಹಾರದಲ್ಲಿ ಅಳವಡಿಸಿ ಕೊಂಡರೆ ತೂಕ ಇಳಿಯುವುದರ ಜತೆಗೆ ಆರೋಗ್ಯ ಕೂಡ ಉತ್ತಮ ಗೊಳ್ಳುತ್ತದೆ.

ರಾತ್ರಿ ಊಟಕ್ಕೆ

ಸಂಜೆಯ ಸಮಯದಲ್ಲಿ ಸ್ನಾಕ್ಸ್ ಅಥವಾ ಏನಾದರೂ ಕುರುಕಲು ತಿಂಡಿ ಸೇವನೆ ಮಾಡಿದ ನಂತರದಲ್ಲಿ ಸುಮಾರು ಮೂರು-ನಾಲ್ಕು ಗಂಟೆಗಳು ಕಳೆದ ನಂತರವಷ್ಟೇ ರಾತ್ರಿಯ ಊಟ ವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಸಾಧ್ಯವಾದಷ್ಟು ಎಣ್ಣೆಯಾಂಶ ಇರುವ ಕುರುಕಲು ತಿಂಡಿ-ತಿನಿ ಸುಗಳಿಂದ ದೂರವಿದ್ದರೆ ಒಳ್ಳೆಯದು. ರಾತ್ರಿ ಊಟಕ್ಕೆ, ಬೇಯಿ ಸಿದ ತರಕಾರಿ, ಇಲ್ಲಾಂದ್ರೆ ತರಕಾರಿ ಸೂಪ್, ಕಡಿಮೆ ಕೊಬ್ಬಿನ ಅಂಶ ಇರುವ ಪನ್ನೀರ್, ನಾರಿನ ಅಂಶ ಇರುವ ಹಣ್ಣು -ತರಕಾರ ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.