Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದಸರಾ ಅಂದರೆ ಸರ್ಕಾರ ಮೂಗು ಮುರಿಯುವುದೇಕೆ?- ಬಿಜೆಪಿ ಟೀಕೆ

ಮೈಸೂರು:ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಸರಕಾರದ ಈ ನಿರ್ಧಾರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್‌ ಮಾಡಿ ’ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು‌ ಮುಂದಾಗಿದೆʼʼ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, I.N.D.I ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ ಸರ್ಕಾರದ ಬಳಿ ಕೋಟಿ ಕೋಟಿ ಹಣವಿದೆ. ಆದರೆ ನಾಡ ಹಬ್ಬ ದಸರಾ ಆಚರಿಸಲು, ಕನ್ನಡ ವಿವಿಗಳಿಗೆ ಅನುದಾನ ಕೊಡಲು, ಹಂಪಿ ಉತ್ಸವ ಆಚರಿಸಲು ಮಾತ್ರ ಸರ್ಕಾರಕ್ಕೆ ಬರ, ಅನುದಾನದ ಕೊರತೆ ಅಡ್ಡ ಬರುತ್ತದೆʼʼ ಎಂದು ಕಿಡಿಕಾರಿದ್ದಾರೆ.

ಈ ಹಿಂದೆಯೂ ಸಿದ್ದರಾಮಯ್ಯ ಅವರು ದಸರಾ ಆಚರಣೆಗೆ ಹಣವಿಲ್ಲವೆಂದು ಹೇಳಿ, ಅದ್ಧೂರಿಯಾಗಿ ರಾಜ್ಯದ ತುಂಬಾ ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮೈಸೂರು ದಸರಾ ಅಂದರೆ ಸರ್ಕಾರ ಮೂಗು ಮುರಿಯುವುದೇಕೆ?ʼʼ ಎಂದು ಬಿಜೆಪಿ  ಟೀಕಿಸಿದೆ