ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ
ದಾಳಿಂಬೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಬಹುತೇಕರು ದಾಳಿಂಬೆ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ದಾಳಿಂಬೆ ಸಿಪ್ಪೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳು ದೊರೆಯಲಿದೆ.
ಚರ್ಮದ ರಕ್ಷಣೆ:ದಾಳಿಂಬೆ ಸಿಪ್ಪೆಯು ಸೂರ್ಯನ ಕಿರಣಗಳನ್ನು ತಡೆಯುವ ಏಜೆಂಟ್ಗಳನ್ನು ಹೊಂದಿದೆ. ಇದು ನಿಮ್ಮ ಚರ್ಮವನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತಾರೆ. ಇದು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಸಿಪ್ಪೆಯ ಬಳಕೆಯು ಸನ್ಟಾನ್ ಅನ್ನು ಸಹ ತೆಗೆದುಹಾಕುತ್ತದೆ.
ಇದಕ್ಕಾಗಿ ಬಿಸಿಲಿನಲ್ಲಿ ಒಣಗಿದ ದಾಳಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಸಂಗ್ರಹಿಸಿ. ಈ ಪುಡಿಯನ್ನು ನಿಮ್ಮ ಲೋಷನ್ ಅಥವಾ ಕೆನೆಯೊಂದಿಗೆ ಬೆರೆಸಿ ಮತ್ತು ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು ಅದನ್ನು ಹಚ್ಚಿಕೊಳ್ಳಬೇಕು. ದಾಳಿಂಬೆ ಸಿಪ್ಪೆಗಳು ನಿಮ್ಮ ಚರ್ಮದಲ್ಲಿನ ಕಾಲಜನ್ ನಾಶವನ್ನು ತಡೆಯುತ್ತದೆ ಮತ್ತು ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಯಸ್ಸಾದ ಮತ್ತು ಸುಕ್ಕುಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
2 ಚಮಚ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಮಿಶ್ರಣ ಮಾಡಿ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಹಾಲಿನ ಬದಲಿಗೆ ರೋಸ್ ವಾಟರ್ ಅನ್ನು ಪುಡಿಯಲ್ಲಿ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಬಾಯಿಯ ದುರ್ವಾಸನೆ, ಬಾಯಿ ಹುಣ್ಣು ನಿವಾರಣೆ:ದಾಳಿಂಬೆ ಸಿಪ್ಪೆಯು ಬಾಯಿಯ ದುರ್ವಾಸನೆ, ಜಿಂಗೈವಿಟಿಸ್ ಮತ್ತು ಬಾಯಿ ಹುಣ್ಣುಗಳನ್ನು ತೆಗೆದುಹಾಕಲು ಪರಿಣಾಮಕಾರಿ ಮಾರ್ಗವಾಗಿದೆ. ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಈ ಮಿಶ್ರಣದಿಂದ ಗಾರ್ಗ್ ಮಾಡಿ. ಇದರಿಂದ ಅನೇಕ ರೀತಿಯ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತವೆ. ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ:ದಾಳಿಂಬೆ ಸಿಪ್ಪೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.
ಇದು ನಿಮ್ಮನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ದಾಳಿಂಬೆ ಸಿಪ್ಪೆಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ರಕ್ತದೊತ್ತಡ ಎರಡನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಕುಡಿಯಿರಿ. ಕೂದಲಿನ ಸಮಸ್ಯೆ ನಿವಾರಣೆ:ದಾಳಿಂಬೆ ಸಿಪ್ಪೆಯ ಪುಡಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇಷ್ಟೆಲ್ಲ ಪ್ರಯೋಜನವಿರುವ ದಾಳಿಂಬೆ ಸಿಪ್ಪೆಯನ್ನು ಎಂದಿಗೂ ಎಸೆಯದೆ. ನಾವೇ ಮನೆಮದ್ದು ಮಾಡಿಕೊಳ್ಳಬಹುದಲ್ಲವೆ..?