Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೆಹಲಿಯಲ್ಲಿ 3.1 ತೀವ್ರತೆಯ ಭೂಕಂಪ- ಮನೆಗಳಿಂದ ಹೊರಬಂದ ಜನ

ಹೊಸದಿಲ್ಲಿ: ದೆಹಲಿಯಲ್ಲಿ ಇಂದು (ಭಾನುವಾರ) ಸಂಜೆ ಭೂಕಂಪನದ ಅನುಭವವಾಗಿದೆ. ಸಂಜೆ 4:08ಕ್ಕೆ ಭೂಕಂಪನದ ಅನುಭವವಾಗಿದ್ದು, ಈ ವೇಳೆ ಜನ ಗಾಬರಿಯಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಪ್ರಮಾಣ ಮತ್ತು ಪರಿಣಾಮದ ಬಗ್ಗೆ ಪರಿಶೀಲಿಸಬೇಕಿದೆ ಎಂದು ವರದಿಯಾಗಿದೆ.

ಹರಿಯಾಣದ ಫರಿದಾಬಾದ್ ಬಳಿ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.1 ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲೂ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.