Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೆಹಲಿ ಬಿಜೆಪಿ ಕಾರ್ಯದರ್ಶಿಯಾಗಿ ಸುಷ್ಮಾ ಪುತ್ರಿ ಬಾನ್ಸುರಿ ಎಂಟ್ರಿ

ನವದೆಹಲಿ : ದೆಹಲಿ ಬಿಜೆಪಿ ಕಾರ್ಯದರ್ಶಿಯಾಗಿ ಬಿಜೆಪಿ ಹಿರಿಯ ನಾಯಕಿ, ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ನೇಮಕ ಮಾಡಲಾಗಿದೆ. ಜೊತೆಗೆ ಪ್ರಧಾನ ಕಾರ್ಯದರ್ಶಿಗಳಾಗಿ ಹರ್ಷಾ ಮಲ್ಹೋತ್ರ, ಯೋಗೇಂದ್ರ ಚಾಂದೋಲಿಯಾ ಹಾಗೂ ಕಮಲಜೀತ್ ಸೆಹ್ರಾವತ್ ಅವರನ್ನು ನೇಮಕ ಮಾಡುವುದರೊಂದಿಗೆ ದೆಹಲಿ ಭಾರತೀಯ ಜನತಾ ಪಕ್ಷದ ಹೊಸ ಪದಾಧಿಕಾರಿಗಳ ತಂಡವನ್ನು ಪ್ರಕಟಿಸಲಾಗಿದೆ. ಹೌದು ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚದೇವಾ ಈ ಕುರಿತು ಘೋಷಣೆ ಮಾಡಿದ್ದಾರೆ. ವಕೀಲೆ ಹಾಗೂ ಉತ್ತಮ ವಾಗ್ಮಿಯಾಗಿರುವ ಬಾನ್ಸುರಿ ಸ್ವರಾಜ್ ತಾಯಿ ರೀತಿಯಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ದೆಹಲಿ ಬಿಜೆಪಿಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೆಡ್ಡು ಹೊಡೆಯಲು ಬಿಜೆಪಿ ಮಹತ್ತರ ಬದಲಾವಣೆ ಮಾಡಿದೆ. ದೆಹಲಿ ಬಿಜೆಪಿಯಲ್ಲಿ ಮಹಿಳಾ ಯುವ ನಾಯಕಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಮುಖಗಳಿಗೆ ಅವಕಾಶ ನೀಡಿರು ದೆಹಲಿ ಬಿಜಿಪಿ, ಪಕ್ಷವನ್ನು ಬಲಪಡಿಸಲು ನಿರ್ಧರಿಸಿದೆ. ಬಾನ್ಸುರಿ ಸ್ವರಾಜ್ ಈ ವರ್ಷದ ಆರಂಭದಲ್ಲೇ ದೆಹಲಿ ಬಿಜೆಪಿಯ ಕಾನೂನು ತಂಡದಲ್ಲಿ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ವಕೀಲೆಯಾಗಿರುವ ಬಾನ್ಸುರಿ ಸ್ವರಾಜ್, ದೆಹಲಿ ಬಿಜೆಪಿ ಹಲವು ಕೇಸ್‌ಗಳನ್ನು ಮುನ್ನಡೆಸುತ್ತಿದ್ದಾರೆ.