Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದಲ್ಲಿ ಮೊದಲ ಬಾರಿಗೆ QR ಕೋಡ್‌ ವೋಟರ್‌ ಸ್ಲಿಪ್‌

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.