‘ದೇಶದ ಜನ ಕಾರ್ಮಿಕರ ಸುರಕ್ಷಿತೆಗಾಗಿ ಪ್ರಾರ್ಥಿಸುತ್ತಿದ್ದರೆ ಗಾಂಧಿ ಕುಟುಂಬ ಡ್ಯಾನ್ಸ್ನಲ್ಲಿ ಮೈಮರೆತಿತ್ತು’- ಅಸ್ಸಾಂ ಸಿಎಂ ಗರಂ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಾ ಅವರ ಡ್ಯಾನ್ಸ್ ವೀಡಿಯೋ ನೋಡಿ ಶರ್ಮಾ ಗರಂ ಆಗಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಸ್ಸಾಂ ಸಿಎಂ, ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವೊಂದರಲ್ಲಿ ¸ಸಿಲುಕಿಕೊಂಡ 41 ಮಂದಿ ಕಾರ್ಮಿಕರನ್ನು ಹೊರತರುವ ಪ್ರಯತ್ನ ನಡೆಯುತ್ತಿತ್ತು. ಈ ಕಾರ್ಯಾಚರಣೆ ನಡೆಯುತ್ತಿದ್ದಾಗ ಇಡೀ ದೇಶ ಕಾರ್ಮಿಕರ ಸುರಕ್ಷಿತವಾಗಿ ಹೊರಬರುವಂತೆ ಪ್ರಾರ್ಥನೆ ಮಾಡುತ್ತರಿದ್ದರು. ಆದರೆ ಗಾಂಧಿ ಕುಟುಂಬ ಮಾತ್ರ ಡ್ಯಾನ್ಸ್ ಮಾಡುವುದರಲ್ಲಿ ಮೈಮರೆತಿತ್ತು ಎಂದು ಕಿಡಿಕಾರಿದ್ದಾರೆ.
26/11 ರ ಮುಂಬೈ ದಾಳಿ ಹಾಗೇ ಯಾವುದೇ ಗಂಭೀರವಾದ ಘಟನೆ ನಡೆದರೂ ಈ ಕುಟುಂಬ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನಲ್ಲ. ಕೇವಲ ಮನರಂಜನೆಯನ್ನು ಮಾತ್ರ ಈ ಕುಟುಂಬ ಬಯಸುತ್ತದೆ ಎಂದು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಅರೋಪಿಸಿದ್ದಾರೆ.
ಸದ್ಯ ಈ ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.