ದ್ವೇಷ ಭಾಷಣ – ಅನಂತ್ ಕುಮಾರ್ ಹೆಗಡೆ ವಿರುದ್ಧ ಸುಮೋಟೋ ಪ್ರಕರಣ ದಾಖಲು
ಕಾರವಾರ: ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕುಮಟಾ ಪೊಲೀಸರು ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿದ್ದಾರೆ.
ಸೆಕ್ಷನ್ 505, ಶಾಂತಿ ಕದಡುವ ಮಾತಿನ ಕಾರಣಕ್ಕೆ ಸೆಕ್ಷನ್ 153 ಎ ಅಡಿಯಲ್ಲಿ ದ್ವೇಷ ಭಾಷಣದ ಕಾರಣಕ್ಕೆ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರ ಬಗ್ಗೆ ಸಂಸದ ಅನಂತ್ ಕುಮಾರ್ ಬಳಸಿದ ಭಾಷೆ, ಚಿನ್ನದ ಪಳ್ಳಿ ಮಸೀದಿಯನ್ನು ಬಾಬರಿ ಮಸೀದಿ ತರಹ ಹೊಡೆದು ಹಾಕಲಾಗುವುದು, ರಣ ಭೈರವ ಎದ್ದಿದ್ದಾನೆ. ಅಹಿಂದ ಎಂಬ ಗತಿಗೆಟ್ಟ ಮಾನಸಿಕತೆ, ಅಲ್ಪಸಂಖ್ಯಾತರಿಗೆ ಮಾರಿಕೊಂಡ ಮುಖ್ಯಮಂತ್ರಿ ಎಂಬ ವಾಕ್ಯಗಳನ್ನು ಬಳಸಿದ್ದರು.