Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಧೋನಿಯೊಂದಿಗೆ ಗಾಲ್ಫ್‌ ಆಡಿದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್​…!

ವಾಷಿಂಗ್ಟನ್​ (ಅಮೆರಿಕ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್ ಕೀಪರ್ ಬ್ಯಾಟರ್‌ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023ರ ನಂತರ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಸ್ವಲ್ಪ ಸಮಯದವರೆಗೆ ಕ್ರಿಕೆಟ್‌ನಿಂದ ಕಾಣೆಯಾಗಿರುವ ಅವರು ರಜಾದಿನಗಳನ್ನು ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಧೋನಿ ಎಲ್ಲಿಗೆ ಹೋದರೂ ಅಪಾರ ಪ್ರೀತಿಯೂ ಸಿಗುತ್ತಿದೆ.

ಕುತೂಹಲದ ಬೆಳವಣಿಗೆಯಲ್ಲಿ ಧೋನಿಗೆ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮಾನಿಯಾಗಿದ್ದಾರೆ. ಧೋನಿ ಅಮೆರಿಕದಲ್ಲಿ ಇರುವುದನ್ನು ತಿಳಿದ ಟ್ರಂಪ್​ ಗಾಲ್ಫ್ ಆಟಕ್ಕೆ ಆತಿಥ್ಯ ನೀಡಿದ್ದಾರೆ.

ಟ್ರಂಪ್​ ಆಹ್ವಾನದ ಮೇರೆಗೆ ಧೋನಿ ಗಾಲ್ಫ್​ ಆಡಲು ತೆರಳಿದ್ದಾರೆ. ಧೋನಿ ಮತ್ತು ಟ್ರಂಪ್​ ಇಬ್ಬರೂ ಒಂದಷ್ಟು ಹೊತ್ತು ಗಾಲ್ಫ್ ಆಡಿ ಟೈಮ್ ಪಾಸ್ ಮಾಡಿದ್ದಾರೆ. ಧೋನಿ ಜತೆ ಆತ್ಮೀಯವಾಗಿ ಮಾತನಾಡಿದ ಟ್ರಂಪ್, ಕ್ರಿಕೆಟ್ ಬಗ್ಗೆ ಹರಟಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ.