Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಕಲಿ ಬಾಬಾನ ಮಾತು ಕೇಳಿ ಅನಾರೋಗ್ಯ ಪೀಡಿತ ಸ್ವಂತ ತಂಗಿಯನ್ನು ಮೌಢ್ಯಕ್ಕೆ ಬಲಿಕೊಟ್ಟ ತಮ್ಮ..!

ಬೆಂಗಳೂರು: ನಕಲಿ ಬಾಬಾನ ಮಾತು ಕೇಳಿ ಮೌಢ್ಯಕ್ಕೆ ಬಲಿಯಾದ ಕುಟುಂಬವೊಂದು ಅನಾರೋಗ್ಯದಿಂದ ನರಳಾಡುತ್ತಿದ್ದ ಯುವತಿಯನ್ನು ಮನೆಯೊಳಗೆ ಕೂಡಿಟ್ಟ ಅಮಾನವೀಯ ಘಟನೆ ಬೆಂಗಳೂರಿನ ಲಗ್ಗೇರಿಯಲ್ಲಿ ಬೆಳಕಿಗೆ ಬಂದಿದೆ.

ಬಾಬಾನ ಮಾತು ಕೇಳಿ ನಾಲ್ಕು ತಿಂಗಳ ಕಾಲ ಗೃಹ ಬಂಧನದಲ್ಲಿದ್ದ ಯುವತಿ (26)ಯನ್ನು ರಕ್ಷಣೆ ಮಾಡಲಾಗಿದೆ.
ಏನಿದು ಘಟನೆ..?
ಮಮತಾಶ್ರೀ96) ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದವಳು. ಪದವಿ ಮುಗಿಸಿದ್ದ ಮಮತಾಳಿಗೆ ನಾಲ್ಕು ತಿಂಗಳ ಹಿಂದೆ ಬೆನ್ನು ನೋವು ಶುರುವಾಗಿತ್ತು. ಮನೆ ಮುದ್ದು, ಮೆಡಿಕಲ್‌ನಿಂದ ಮಾತ್ರೆಗಳನ್ನು ನುಂಗಿದ್ದರೂ ನೋವು ಮಾತ್ರ ಶಮನವಾಗಲಿಲ್ಲ. ಇತ್ತ ಮಮತಾಳ ಬೆನ್ನು ನೋವಿಗೆ ಆಸ್ಪತ್ರೆಗೆ ತೋರಿಸದೇ ಆಕೆಯ ತಮ್ಮ ಪ್ರಶಾಂತ್‌ ಎಂಬಾತ ಆಸ್ಪತ್ರೆ ಸಹವಾಸ ಬೇಡ್ವೇ ಬೇಡ ಎಂದು ನಕಲಿ ಬಾಬಾನ ಮೊರೆ ಹೋಗಿದ್ದ. ನಕಲಿ ಬಾಬಾನ ಮಾತು ಕೇಳಿ ಮಮತಾಳಿಗೆ ಮೂರು ತಿಂಗಳಿಂದ ಅರಿಶಿನದ ನೀರು, ನಿಂಬೆ ಹಣ್ಣು ನೀರು ಕುಡಿಸುತ್ತಿದ್ದ. ಆದರೆ ಊಟವನ್ನೇ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು. ಈ ಮಧ್ಯೆ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆಕೆಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಆದ್ರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೇ ಮನೆಯಲ್ಲೇ ಕೂಡು ಹಾಕಿದ್ದ.

ಸ್ವಂತ ತಮ್ಮನೇ ತನ್ನ ಸಹೋದರಿ ಮಮತಾ ಶ್ರೀ(26) ಯನ್ನು ನಾಲ್ಕು ತಿಂಗಳಿಂದ ನಾಲ್ಕು ಗೋಡೆಗಳ ಮಧ್ಯೆ ಗೃಹ ಬಂಧನದಲ್ಲಿಟ್ಟಿದ್ದ. ಯುವತಿಗೆ ಹೊಟ್ಟೆ ಊದಿಕೊಂಡು ನರಳಾಡುತ್ತಿದ್ದರೂ ಆಸ್ಪತ್ರೆಗೆ ತೋರಿಸದೇ ಕುಟುಂಬ ನಿರ್ಲಕ್ಷ್ಯ ವಹಿಸಿತ್ತು. ತೀವ್ರ ಹೊಟ್ಟೆ ನೋವು ತಾಳಲಾರದೇ ಯುವತಿ ಕಿರುಚಾಡಿದ್ದಕ್ಕೆ ತಮ್ಮ ಅಕ್ಕನ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ. ಕೊನೆಗೆ ದಾರಿ ಕಾಣದೆ ಪ್ಲೀಸ್ ನನ್ನನ್ನು ಕಾಪಾಡಿ, ಸಹಾಯ ಮಾಡಿ ಎಂದು ಪರಿಚಯಸ್ಥರಿಗೆ ಯುವತಿ ಮೆಸೇಜ್ ಮಾಡಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ ಆದ್ರೂ ಆಕೆಯ ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ರೋಗ ಅದಾಗಲೇ ಉಲ್ಭಣಗೊಂಡಿದ್ದು ಜ್ಯೋತಿಷಿ ಮಾತು ಕೇಳಿದ ಕುಟುಂಬಸ್ಥರು ಯುವತಿಗೆ ಚಿಕಿತ್ಸೆ ಕೊಡಿಸದೇ ಜೀವಕ್ಕೆ ಕುತ್ತು ತಂದಿದ್ದಾರೆ. ಇತ್ತ ಅಬ್ದುಲ್ ಎಂಬಾತ ನಕಲಿ ಬಾಬಾನನ್ನು ಹಿಡಿದು ಪೊರಕೆ ಸೇವೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಊರಿನವರು.