Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಗರಸಭೆ ಸದಸ್ಯ ಸೇರಿದಂತೆ 14 ಮಂದಿ ಇಸ್ಪೀಟ್ ಆಟ.! ಬಂಧನ.

 

ಚಿತ್ರದುರ್ಗ: ನಗರಸಭೆ ಸದಸ್ಯ ಸೇರಿ ಇಸ್ಪೀಟ್ ಆಡುತ್ತಿದ್ದ 14 ಮಂದಿಯನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.

ಬಂಧಿತರಿಂದ 4 ಲಕ್ಷದ 37 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮತ್ತಿಬ್ಬರು ನಗರಸಭೆ ಸದಸ್ಯರಾದ ಅನೀಲ್‌ ಕುಮಾ‌ರ್, ಅಜ್ಜಪ್ಪ ಪರಾರಿಯಾಗಿದ್ದಾರೆ.

ಬಂಧಿತರು ವಿವಿ ಸಾಗರ ಐಬಿಯಲ್ಲಿ ಇಸ್ಪೀಟ್ ಆಡುತ್ತಿದ್ದರು. ಇವರಲ್ಲಿ ನಗರಭೆ ಜಗದೀಶ್ ಸೇರಿ 14 ಇದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಚಿತ್ರದುರ್ಗ ಎಸ್ ಪಿ ಧರ್ಮೇಂದರ್ ಕುಮಾ‌ರ್ ಮೀನಾ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಅಂಡ್ ಟೀಂ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.