Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ಸಂಯುಕ್ತಾ ಹೆಗ್ಡೆ ಬಿಗ್ ಬಾಸ್ ಸ್ಪರ್ಧಿ ಕಿಶನ್ ರೋಮ್ಯಾಂಟಿಕ್ ಡ್ಯಾನ್ಸ್ – ವೈರಲ್ ಆದ ವಿಡಿಯೋ

ಬೆಂಗಳೂರು ಸೆಪ್ಟೆಂಬರ್ 29: ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸದಾ ಟ್ರೆಂಡಿಂಗ್ ನಲ್ಲಿರುವ ನಟಿ ಸಂಯುಕ್ತಾ ಹೆಗ್ಡೆ ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿ ಕಿಶನ್ ಜೊತೆ ಮಾಡಿರುವ ರೀಲ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಬ್ಬರೂ ವೈಟ್ & ವೈಟ್​ನಲ್ಲಿ ಡ್ರೇಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಯುಕ್ತಾ ಹೆಗ್ಡೆ ಬೋಲ್ಡ್ ಆಗಿ ಡ್ರೆಸ್ ಮಾಡಿದ್ದರು. ನೀನೆಂದರೆ ನನ್ನೊಳಗೆ ಹಾಡಿಗೆ ಇಬ್ಬರೂ ಕೂಡಾ ಫುಲ್ ರೊಮ್ಯಾಂಟಿಕ್ ಮೂಡ್​ನಲ್ಲಿ ಹೆಜ್ಜೆ ಹಾಕಿದ್ದು ಸೂಪರ್ ಆಗಿ ಮೂಡಿಬಂದಿದೆ ಇವರ ಡ್ಯಾನ್ಸ್.

ಡ್ಯಾನ್ಸ್ ಚೆನ್ನಾಗಿ ಮಾಡಿದ್ದರೂ ಬಹಳಷ್ಟು ಜನರು ಸಂಯುಕ್ತಾ ಅವರನ್ನು ಅವರು ಧರಿಸಿದ ಡ್ರೆಸ್​ಗಾಗಿ ಟ್ರೋಲ್ ಮಾಡಿದ್ದಾರೆ. ಸರಿಯಾಗಿ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದರೆ ಟ್ಯಾಲೆಂಟ್ ಶೋ ಆಗಲ್ವಾ? ಎಂದು ಕೇಳಿದ್ದಾರೆ. ಇನ್ನೂ ಕೆಲವರು ಡ್ಯಾನ್ಸ್ ಚೆನ್ನಾಗಿದೆ ಹಾಗೆಯೇ ಬಟ್ಟೆಯೂ ಸರಿಯಾಗಿ ಹಾಕಿ ಎಂದಿದ್ದಾರೆ.

ಇನ್ನೂ ಕೆಲವರು ನಿಮ್ಮ ಪ್ರತಿಭೆ ತೋರಿಸಲು ಮೈ ತೋರಿಸುವ ಬಟ್ಟೆ ಏಕೆ ಧರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ನೂರು ಸಲ ನೋಡುವ ಹಾಗೆ ಮಾಡಿ ನೇಟ್ ಎಲ್ಲ ಖಾಲಿ ಎಂದಿದ್ದಾರೆ ಇನ್ನೊಬ್ಬರು. ಬಟ್ಟೆಗೆ ದುಡ್ಡು ಇಲ್ಲ ಅನ್ಸುತ್ತೆ ಎಂದಿದ್ದಾರೆ ಇನ್ನೊಬ್ಬರು.
ಇವರಿಬ್ಬರ ಜೋಡಿ ನೃತ್ಯಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಬಹಳಷ್ಟು ಜನರು ಕಮೆಂಟ್ ಕೂಡಾ ಮಾಡಿದ್ದಾರೆ.