ನಮ್ಮೂರು ನನ್ನ ಸಾಹಿತಿ: ಮಿಂಚಿ ಮರೆಯಾದ ಪ್ರೊ ಎಚ್. ಶ್ರೀಶೈಲ ಆರಾಧ್ಯರ ಒಂದು ನೆನೆಪು: -ಸಂ.ಲೇಖನ: ಕೆ.ಪಿ.ಎಂ.ಗಣೇಶಯ್ಯ
(ಜನನ: ಅಕ್ಟೋಬರ್ 1946, ಮರಣ: 04-01-2024.)
ಹುಟ್ಟಿನ ಘಳಿಗೆ : ಸ್ವಾತಂತ್ರ್ಯ ಭಾರತ ಸ್ವಾತಂತ್ರ್ಯದ ಅಂಚಿನಲ್ಲಿ ಆಗತಾನೆ 1946ರಲ್ಲಿ ಜನ್ಮತಾಳಿದ ಹಿರಿಯ ಸಾಹಿತಿ ಪ್ರೊ.ಶ್ರೀಶೈಲ ಆರಾಧ್ಯರ ಬದುಕು, ಸ್ವಾತಂತ್ರ್ಯದ ಬದುಕು ಬದುಕಿನ ಮಧ್ಯೆ ಅರಳಿದ ದೈತ್ಯ ಸಾಹಿತ್ಯ ಪ್ರತಿಭೆ. ಸಾಮಾನ್ಯವಾಗಿ ಸ್ವಾತಂತ್ರö್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದ ಆಡಳಿತ ಸೂತ್ರದ ಹೊಸನಾಂದಿ ಹಾಡಬಹುದಾದ ಸಂದರ್ಭದ ಇತಿಹಾಸದ ಪುಟಗಳಲ್ಲಿ ಬೆಳೆದುಬಂದ ರೀತಿ ಇಂದು ಸಂಶೋಧಕರ ಸಾಲಿನಲ್ಲಿ ಅಚ್ಚಳಿಯದೇ ಉಳಿದ ಧೀಮಂತರೆಂದರೆ ಅವರೇ ಪ್ರೊ.ಶ್ರೀಶೈಲ ಆರಾಧ್ಯರು.
ಅಪ್ಪ-ಅಮ್ಮ, ಊರು, ತುಂಬು ಸಂಸಾರ, ವಿದ್ಯಾಭ್ಯಾಸ:
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಅಕ್ಟೋಬರ್ 1946 ರಲ್ಲಿ ಜನಿಸಿದರು. ತಂದೆ ಜೆ.ಹಾಲಾರಾಧ್ಯ, ತಾಯಿ ಮರುಳಮ್ಮ ಇವರ ಜೇಷ್ಠಪುತ್ರ. ಪತ್ನಿ ಸಿ.ವಿ.ಉಮಾದೇವಿ. ಇವರಿಗೆ ಮೂವರು ಹೆಣ್ಣುಮಕ್ಕಳು. ಎಸ್.ಎಸ್.ರೋಹಿಣಿ ಶೈಲೇಂದ್ರ, ಡಾ.ಎಸ್.ಎಸ್.ಅನುರಾಧ ಡಾ.ನಾಗರಾಜ್, ಮತ್ತೊಬ್ಬರು ವಿಧಿವಶರಾಗಿದ್ದಾರೆ. ತುಂಬು ಜೀವನದ ಮುದ್ದಿನ ಮಕ್ಕಳ ಲಾಲನೆ ಪಾಲನೆಯಲ್ಲಿ ಸುಖದುಃಖ, ನೋವು ನಲಿವುಗಳನ್ನು ಕಂಡ ಕ್ಷಣಗಳು ಅನೇಕ. ಸ್ವಗ್ರಾಮ ಸೋಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೂದಿಹಾಳು ಮತ್ತು ಶ್ರೀರಾಂಪುರದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ, ತುಮಕೂರು ಮತ್ತು ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದ ಆರಾಧ್ಯರು ಕನ್ನಡದ ಸಾರಸ್ವತ ಲೋಕದ ಹಳಗನ್ನಡ, ಮಧ್ಯಕಾಲೀನ, ನವೋದಯ, ಆಧುನಿಕ ಕನ್ನಡ ಸಾಹಿತ್ಯದ ಅರಿವಿನ ಬುತ್ತಿಯನ್ನು ಕಟ್ಟಿಕೊಂಡರು. ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಕಾಲೇಜುಗಳಲ್ಲಿ 33 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯಬಳಗವನ್ನು ಸಂಪಾದಿಸಿದ್ದಾರೆ. ಮಾತ್ರವಲ್ಲದೆ ಜ್ಯೋತಿಷ್ಯ ಅಧ್ಯಯನ, ರತ್ನಶಾಸ್ತç, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಸಧ್ಯಯನ, ಮರಗಿಡ, ಅಂಚೆಯ ಸಾöö್ಯಂಪು ಇತ್ಯಾದಿಗಳನ್ನು ಬರೆದು ಹಾಗೂ ಸಂಪಾದಿಸಿದ ಕೃತಿಗಳಾಗಿವೆ.
ಇತಿಹಾಸದ ನಂಟು:
ಹುಟ್ಟಿದೂರಿನ ಕೋಟೆಕೊತ್ತಲ, ಗುಡಿ, ಹಳ್ಳ-ಕೊಳ್ಳ, ಉಪ್ಪಿನ ಮಾಳೆ, ಗುಡ್ಡ, ಗವಿ, ಕಲ್ಲು ಪಡಾವುಗಳ ನಡುವೆ ಬೆಳೆದ ಆರಾಧ್ಯರು, ಸ್ವಾತಂತ್ರö್ಯ ಹೋರಾಟ, ಗಾಂಧೀ ಬದುಕು, ತತ್ವ, ದೇಶ, ಸಮಾಜಸ್ವಾಸ್ಥö್ಯದ ಬಗ್ಗೆ ಅಪ್ಪ ಅಮ್ಮನ ಮಾರ್ಗದರ್ಶನವು ಪ್ರಾಧ್ಯಪಕನಾಗಿ ರೂಪುಗೊಳ್ಳಲು ಅನುಕೂಲವಾಯ್ತು. ನಾಡಿನ ಸಂಸ್ಕೃತಿ, ಪ್ರಾಚೀನ ಇತಿಹಾಸ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ ಆಚರಣೆಗಳ ಬಗೆಗೆ ಮೂವತ್ತಕ್ಕೂ ಹೆಚ್ಚು ಲೇಖನಗಳನ್ನು ಮಂಡಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಯಲ್ಲಿನ ಶಿಲಾಯುಗದ ಮಾನವ ವಿರಚಿತ ರೇಖಾಚಿತ್ರಗಳು, ನೆರಳು ಬೆಳಕಿನ ಚಿತ್ರಗಳು, ಹುಟ್ಟು ಬಂಡೆಗಳಲ್ಲಿನ ಪ್ರಾಣಿ ಮತ್ತು ಮನುಷ್ಯನ ಆಕೃತಿಗಳನ್ನು ಉಜ್ಜಿ ಮೂಡಿಸಿರುವ ವಿಷಯ ಕುರಿತ ಸಂಶೋಧನೆಯ ಹಾದಿಯಲ್ಲಿ ಎಂಬ ಕೃತಿಯನ್ನು 1983 ರಲ್ಲಿ ಪ್ರಕಟಿಸಿದರು. ಪುರಾತನ ಇತಿಹಾಸದ ಪ್ಮಟಗಳನ್ನು ಅಧ್ಯಯನಕ್ಕಾಗಿ ತೆರೆದಿಟ್ಟರು. ಆಸಕ್ತಿ ತಳೆದ ಅನೇಕ ದೇಶೀಯರು ಮತ್ತು ವಿದೇಶಿ ವಿದ್ವಾಂಸರು ಇವರ ಕೃತಿಯಿಂದಾಗಿ ಆಕರ್ಷಿತರಾಗಿ ಸಂಶೋಧನೆಯ ವಿದ್ಯಾಭ್ಯಾಸಗಳಲ್ಲಿ ತೊಡಗಿದ್ದಾರೆ. ಇದೊಂದು ಕಾರ್ಯಶೋಧನೆ ತಮ್ಮ ಜೀವನದ ಒಂದು ಸಾಧನೆಯ ಮೈಲಿಗಲ್ಲು ಎಂದು ಆರಾಧ್ಯರು ಒಂದೆಡೆ ಸ್ಮರಿಸುತ್ತಾರೆ.
ಸಾಹಿತ್ಯ ಕೃಷಿ:
ಕಾಶಿ ಸಾಹಿತ್ಯ ಸಮೀಕ್ಷೆ (ಸಂಭಾವನ ಕೃತಿ-ಸಂಪಾದನೆ), ಸಂಶೋಧನೆಯ ಹಾದಿಯಲ್ಲಿ (ಪ್ರಾಚೀನ ಗುಹಾಚಿತ್ರಗಳ ಬಗೆಗೆ), ಸೀಮೇಗಿಲ್ಲದೋರ ಸೂರಿನ ಕೆಳಗೆ (ಗೆ ಲೇಖನಗಳು), ಚಿತ್ರದುರ್ಗ (ವಯಸ್ಕರ ಶಿಕ್ಷಣ ಸಮಿತಿಗೆ), ಚಿತ್ರದುರ್ಗ (ರಾಜ್ಯ ಮತ್ತು ಪ್ರಚಾರ ಇಲಾಖೆಗೆ), ಸೋಮನ ಕರಿಯಪ್ಪ (ಜಾನಪದ ಅಕಾದೆಮಿಗೆ), ಗಿರಿಮಲ್ಲಿಗೆ (ತರಾಸು ಸ್ಮರಣ ಸಂಪುಟದ ಸಂಪಾದನೆ), ರಾಷ್ಟçನಾಯಕ (ಎಸ್ಸೆನ್ ಸಂಪುಟದ ಸಂಪಾದನೆ –ವಿದ್ವಾಂಸ ಮಿತ್ರರೊಡನೆ), ಪನ್ನೀರು ಗಿಂಡಿ (ಚಿತ್ರಣ,2020), ಚಿತ್ರದುರ್ಗ ಜಿಲ್ಲೆಯ ಮೂವರು ಅವಧೂತರು (2021).
ಸ್ಥಾನಮಾನಗಳು:
ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆ ಇವುಗಳ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿ ಗೌರವಗಳು:
ಚಿತ್ರದುರ್ಗ ಜ್ಞಾನಭಾರತಿ ಟ್ರಸ್ಟ್ ಗೌರವ (2000), ಚಿತ್ರದುರ್ಗ ಜಿಲ್ಲಾ ಉತ್ಸವದಲ್ಲಿ ಗೌರವ (2006), ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾಡಳಿತದಿಂದ ಗೌರವ (2006), 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿ ಗೌರವ (2007), ಕಾಂಗ್ರೇಸ್ ಸಂಸ್ಥಾಪನಾ 127ನೇ ವರ್ಷಾಚರಣೆ ಸಚಿದರ್ಭ ಚಿತ್ರದುರ್ಗ ಕಾಂಗ್ರೇಸ್ ಸಮಿತಿ ವತಿಯಿಂದ ಗೌರವ (2011), ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ “ಮುರುಘಾಶ್ರೀ” ಪ್ರಶಿಸ್ತಿ ಸ್ವೀಕರಿಸಿದ್ದಾರೆ.
ಸಂ.ಲೇಖನ: ಕೆ.ಪಿ.ಎಂ.ಗಣೇಶಯ್ಯ, ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ ದೂ: 9448664878