ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಓಡಾಡಲು ಪ್ರಾರಂಭಿಸಿದ ಮೇಲೆ ಟ್ರಾಫಿಕ್ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಕಮ್ಮಿಯಾಗಿದೆಯಾದರೂ ಕೆಲವು ಕಡೆ ಬೆಂಗಳೂರಿನ ಟ್ರಾಫಿಕ್ ಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕುವವರ ಸಂಖ್ಯೆ ಕಮ್ಮಿಯಾಗಿಲ್ಲ.ಇನ್ನು ಮೆಟ್ರೋ ಎರಡನೇ ಮತ್ತು ಮೂರನೇ ಹಂತದ ಕಾಮಗಾರಿ ಆರಂಭವಾಗಿರುವ ಸ್ಥಳಗಳಲ್ಲಿ ಜನರಿಗೆ ಯಾವಾಗ ಮುಗಿಯುತ್ತೋ ಎನ್ನುವ ತಲೆ ಬಿಸಿ ಈಗಾಗಲೇ ಆರಂಭವಾಗಿದೆ.ಇದೆಲ್ಲದರ ಮಧ್ಯೆ ಮೆಟ್ರೋಗಾಗಿ ಗ್ರೀನ್ ಸಿಟಿ ಎಂಬ ಹಣೆಪಟ್ಟಿ ಹೊತ್ತಿದ್ದ ಬೆಂಗಳೂರಿನಲ್ಲಿ ಸಾಲು ಸಾಲು ಮರಗಳ ಮಾರಣಹೋಮ ಪರಿಸರ ಪ್ರೇಮಿಗಳ ಮನದಲ್ಲಿ ಆತಂಕ ತಂದಿದೆ.

ಒಂದು ಕಾಲದಲ್ಲಿ ಮರಗಳ ನೆರಳಿನಿಂದ ತಂಪಾಗಿದ್ದ ಬೆಂಗಳೂರಿನ ರಸ್ತೆಗಳು ಇಂದು ಬಿಸಿಲಿನ ತಾಪಕ್ಕೆ ಬೆದರಿವೆ.ಮೆಟ್ರೋ ಮತ್ತು ಫ್ಲೈ ಓವರ್ ಗಳ ಕಾರ್ಯಾಚರಣೆ ಬೆಂಗಳೂರಿನಲ್ಲಿ ಜನರಿಗೆ ಟ್ರಾಫಿಕ್ ಕಿರಿಕಿರಿ ಜೊತೆ ಪರಿಸರವಾದಿಗಳ ಆತಂಕಕ್ಕೂ ಕಾರಣವಾಗಿದೆ.ಏನೆ ಆದರೂ ಮೆಟ್ರೋ ಬಂದ ಮೇಲೆ ಬೆಂಗಳೂರಿನ ಜನರಿಗೆ ಅನುಕೂಲ ಆಗಿರುವುದು ಎಷ್ಟು ಸತ್ಯವೋ ಅಷ್ಟೇ ಕೆಲವರಿಗೆ ಕಿರಿಕಿರಿ ತಂದಿದೆ.ಕೆಲವು ತೊಂದರೆಗಳನ್ನು ಕಳೆದುಕೊಳ್ಳಲು ಮತ್ತೆ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಮೆಟ್ರೋ ವಿಷಯದಲ್ಲಿ ನಿಜವಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here