ನರೇಂದ್ರ ಮೋದಿ ಉಪವಾಸ ಇದ್ದಹಾಗೆ ಕಾಣಲಿಲ್ಲ- ವೀರಪ್ಪ ಮೊಯ್ಲಿ ಟೀಕೆ
ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾಪನೆಗೂ ಮೊದಲು ಪ್ರಧಾನಿ ಮೋದಿಯವರು 11 ದಿನಗಳ ಕಾಲ ಕಠೀನ ವ್ರತಾಚರಣೆ ಕೈಗೊಂಡಿದ್ದರು ಆದರೆ ಪ್ರಧಾನಿಯವರ 11 ದಿನಗಳ ಕಠಿಣ ಉಪವಾಸ ವ್ರತದ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ. ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದ್ರು. ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣಲಿಲ್ಲ. ದೇವರಿಗೆ ಇಚ್ಛೆ ಪ್ರಕಾರ ಏನು ಬೇಕಾದರೂ ಮಾಡಲಿ. ಅದ್ರೆ ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಎಂದು ಪ್ರಧಾನಿ ಮೋದಿ ಅವರ ಉಪವಾಸದ ಬಗ್ಗೆ ಟೀಕಾ ಪ್ರಹಾರ ಮಾಡಿದ್ದಾರೆ.